ಒರಿಸ್ಸಾದ ಕಂಧಮಲ್‌ನಲ್ಲಿ ನಡೆದ ಕೋಮುಗಲಭೆಯ ವೇಳೆ ನಡೆದಿದೆಯೆನ್ನಲಾಗಿರುವ ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಹತ್ತು ತಿಂಗಳ ಬಳಿಕ ಮತ್ತೊಬ್ಬ ಬೇಕಾಗಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ಒಟ್ಟು ಬಂಧಿತರ ಸಂಖ್ಯೆ 18ಕ್ಕೇರಿದೆ.
ಕಂಧಮಲ್ ಜಿಲ್ಲೆಯ ಬಲಿಗುಡ ಪ್ರದೇಶದ ಕೆ ನೌಗಾಂವ್ ಎಂಬಲ್ಲಿಂದ ಬಂಧಿಸಲಾಗಿದೆ. ಇವರ ವಿರುದ್ಧ 29ರ ಹರೆಯ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊರಿಸಲಾಗಿದೆ.
ಕಳೆದ ಆಗಸ್ಟ್ 23ರಂದು ವಿಶ್ವಹಿಂದೂ ಪರಿಷತ್ ನಾಯಕ ಲಕ್ಷ್ಮಣಾನಂದ ಸರಸ್ವತಿ ಅವರ ಕೊಲೆ ನಡೆದಿದ್ದು, ಬಳಿಕ ನಡೆದ ಗಲಭೆಯ ವೇಳೆ ಆಗಸ್ಟ್ 25ರಂದು ಸನ್ಯಾಸಿನಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ದುಷ್ಕೃತ್ಯದಲ್ಲಿ ತೊಡಗಿದ್ದವರಿಗೆ ಬಿಶ್ನೋಯಿ ಉತ್ತೇಜನ ನೀಡಿರುವುದಾಗಿ ಆರೋಪಿಸಲಾಗಿದೆ.
ಈ ಹಿಂದೆ ಬಂಧಿಸಲಾಗಿರುವ 17 ಮಂದಿಯಲ್ಲಿ ಮೂವರನ್ನು ಸನ್ಯಾಸಿನಿ ಗುರುತಿಸಿದ್ದಾರೆ. |