ನ್ಯಾಯಾಲಯದ ಪ್ರಕ್ರಿಯೆ ವೇಳೆ ನ್ಯಾಯಾಧೀಶರೊಬ್ಬರ ಮೇಲೆ ಹಲ್ಲೆ ನಡೆಸಿ ಅಸಭ್ಯವಾಗಿ ನಡೆದುಕೊಂಡಿರುವ ನಾಲ್ವರು ವಕೀಲರಿಗೆ ದೆಹಲಿ ಹೈಕೋರ್ಟ್ ನ್ಯಾಯಾಲಯ ನಿಂದನಾ ನೋಟೀಸು ಕಳುಹಿಸಿದೆ.
"ಪ್ರಕರಣವು ಮೇಲ್ನೋಟಕ್ಕೆ ಕಾಣುವಂತೆ ನ್ಯಾಯಾಲಯ ನಿಂದನೆ ಉಂಟಾಗಿದೆ" ಎಂಬುದಾಗಿ ಮುಖ್ಯನ್ಯಾಯಾಧೀಶ ಎ.ಪಿ. ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಪೀಠವು ಏಕಪಕ್ಷೀಯವಾಗಿ ಮಧ್ಯಪ್ರವೇಶ ಮಾಡಿದ್ದು ನೋಟೀಸು ನೀಡಿದೆ.
ಮುನಿಶ್ ಚೌವಾಣ್, ರೇಖಾ ಶರ್ಮಾ, ರಾಜೀವ್ ತೆಹ್ಲಾನ್ ಮತ್ತು ಜೈ ಪ್ರಕಾಶ್ ಎಂಬ ವಕೀಲರಿಗೆ ನೋಟೀಸು ನೀಡಲಾಗಿದೆ. ಈ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯವು ತ್ರಿಸದಸ್ಯ ವಿಶೇಷ ಪೀಠವನ್ನು ನೇಮಿಸಿದ್ದು, ಆಗಸ್ಟ್ 4ರಂದು ಪ್ರಕರಣದ ವಿಚಾರಣೆ ನಡೆಸಲಾಗುವುದು.
ನಾಲ್ವರು ವಕೀಲರು ಪಂಕಜ್ ಗುಪ್ತಾ ಎಂಬ ನ್ಯಾಯಾಧೀಶಕರಿಗೆ ಕಪಾಳಮೋಕ್ಷಮಾಡಿದ್ದು, ಬಳಿಕ ಎಳೆದಾಡಿದ್ದರು. ಈ ಘಟನೆಯು ಜುಲೈ 8ರಂದು ರೋಹಿಣಿ ಜಿಲ್ಲೆ ನ್ಯಾಯಾಲಯಲ್ಲಿ ಸಂಭವಿಸಿತ್ತು. |