ಜನಸಂಖ್ಯೆ ಕಡಿಮೆಗೊಳಿಸಲು ಕೇಂದ್ರ ಆರೋಗ್ಯ ಸಚಿನ ಗುಲಾಂ ನಬೀ ಆಜಾದ್ ಅದ್ಭುತ ಸಲಹೆಯೊಂದನ್ನು ಕೊಟ್ಟಿದ್ದಾರೆ. ಲೇಟಾಗಿ ಮದುವೆಯಾಗೋದು!
ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ, 18 ವರ್ಷದ ನಂತರ ಮದುವೆಯಾಗುವ ಮತ್ತು ಕುಟುಂಬ ಯೋಜನೆ ಮಾಡಿಸಿಕೊಂಡಿರುವ ದಂಪತಿಗಳನ್ನು ಪುರಸ್ಕರಿಸುವ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡುತ್ತಿದ್ದ ಆಜಾದ್, ಇಂಥವರನ್ನೆಲ್ಲಾ ಸನ್ಮಾನಿಸುವ ಅಗತ್ಯವಿಲ್ಲ. ಯಾಕೆಂದರೆ ಅವರೆಲ್ಲರೂ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
30-31 ವರ್ಷದವರು ಮದುವೆಯಾದರೆ ಮಾತ್ರವೇ ಸನ್ಮಾನ ಮಾಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆಗಿದ್ದ ಗುಲಾಂ ಹೇಳಿದರು.
ಹಾಗಿದ್ದರೆ, ಮದುವೆಯಾಗುವ ವಯಸ್ಸಿನ ಮಿತಿಯನ್ನು 30ಕ್ಕೆ ಏರಿಸಬೇಕೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು, ಇಲ್ಲ, ಹಾಗೇನಿಲ್ಲ, ನಾನು ಸನ್ಮಾನ ಮಾಡುವ ಬಗ್ಗೆ ಮಾತ್ರವಷ್ಟೇ ಹೇಳಿದೆ ಎಂದು ಉತ್ತರಿಸಿದರು. |