ಯುನೈಟೆಡ್ ಬ್ರಿವರೀಸ್ ಗುಂಪಿನ ಅಧ್ಯಕ್ಷ ವಿಜಯ್ ಮಲ್ಯ ಅವರು ಗುಜರಾತ್ ರಾಜ್ಯದಲ್ಲಿ ಮದ್ಯನಿಷೇಧ ಮಾಡಿರುವ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುತ್ತಾರೆ. ರಾಜ್ಯದಲ್ಲಿ ಮದ್ಯನಿಷೇಧವನ್ನು ಹಿಂತೆಗೆಕೊಳ್ಳಬೇಕು ಎಂದು ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಹೇಳಿರುವ ಮಲ್ಯ, ಮದ್ಯ ನಿಷೇಧವಿಲ್ಲದಿರುವ ರಾಜ್ಯಗಳಲ್ಲೂ ಕಳ್ಳಭಟ್ಟಿ ದುರಂತಗಳು ನಡೆಯುತ್ತವೆ ಎಂದು ಹೇಳಿದ್ದಾರೆ.ಮದ್ಯ ಕಳ್ಳಸಾಗಣೆಯು ಅಹಮದಾಬಾದಿನಲ್ಲಿ ನಡೆದಿರುವ ಕಳ್ಳಭಟ್ಟಿ ದುರಂತಕ್ಕೆ ಕಾರಣ ಎಂದು ಮಲ್ಯ ಹೇಳಿದ್ದಾರೆ. ರಾಜ್ಯದಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ ಇದುವರೆಗೆ 136 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 300 ಮಂದಿಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಗುಜರಾತಿನಲ್ಲಿ ಎಲ್ಲಾ ಬ್ರಾಂಡಿನ ಮದ್ಯ ಲಭ್ಯ ಎಂದು ಮೋದಿ ಆಪಾದಿಸಿದ್ದಾರೆ. ಆದರೆ ಇವುಗಳ ದರವು ನೆರೆಯರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಹೇರಲಾಗಿರುವ ಮದ್ಯನಿಷೇಧವನ್ನು ಹಿಂತೆಗೆಯಲು ಅವರು ಕರೆ ನೀಡಿದ್ದಾರೆ.ಆದರೆ ಮಲ್ಯರ ಈ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಗುಜರಾತ್ ಸರ್ಕಾರ, ಮಲ್ಯ ಒಬ್ಬ ಸ್ವಾರ್ಥಿ ಎಂದಿದ್ದು, ಇಂತಹ ಸಂದರ್ಭದಲ್ಲಿ ಅವರು ತನ್ನ ವ್ಯಾಪಾರದ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಹೇಳಿದೆ." ಮಲ್ಯ ಅವರು ತಮ್ಮ ಮದ್ಯವ್ಯವಹಾರವನ್ನು ಗಮನಿಸಿಕೊಳ್ಳಲಿ. ಅವರು ನಮ್ಮ ವಿಚಾರದಲ್ಲಿ ಮೂಗುತೂರಬಾರದು. ಅವರು ಅವರ ಸಲಹೆಗಳನ್ನು ಅವರಿಗೆ ಇರಿಸಿಕೊಳ್ಳಲಿ. ನಮಗೆ ಅದರ ಅವಶ್ಯಕತೆ ಇಲ್ಲ" ಎಂಬುದಾಗಿ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಸರ್ಕಾರಿ ವಕ್ತಾರ ಜೈನಾರಾಯಣ್ ವ್ಯಾಸ್ ಹೇಳಿದ್ದಾರೆ |