ಚತ್ತೀಸ್‌ಗಢದಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಗೈದಿದ್ದು, ಭಾನುವಾರ ನಡೆಸಿದ ದಾಳಿಯಲ್ಲಿ ಎಸ್ಪಿ ರ‌್ಯಾಂಕಿನ ಅಧಿಕಾರಿಯೊಬ್ಬರು ಸೇರಿದಂತೆ 26 ಪೊಲೀಸರು ಹತರಾಗಿದ್ದಾರೆ.
ರಾಜ್‌ನಂದಗಾಂವ್ ಜಿಲ್ಲೆಯ ಭಿಲಾಯ್ ವಲಯದ ಐಜಿಯವರ ಮೋಟರ್‌ಕೇಡ್ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದು ಈ ವೇಳೆ ಇತರ 31 ಪೊಲೀಸರು ಗಾಯಗೊಂಡಿದ್ದಾರೆ.
ದಾಳಿಯ ಹೆಚ್ಚಿನ ವಿವರಗಳು ತಕ್ಷಣ ಲಭ್ಯವಾಗಿಲ್ಲ ಹಾನಿಯ ಪ್ರಮಾಣವು ನಕ್ಸಲರು ಉತ್ತಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆಂಬುದನ್ನು ಸೂಚಿಸುತ್ತದೆ ಎಂಬುದಾಗಿ ಪ್ರಾಥಮಿಕ ವರದಿಗಳು ಹೇಳಿವೆ. |