ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರನ್ನು ಸಿಪಿಐ(ಎಂ) ಪಾಲಿಟ್‌ಬ್ಯೂರೋದಿಂದ ವಜಾ ಮಾಡಲಾಗಿದೆ. ಪಕ್ಷದ ಕೇರಳ ಘಟಕದಲ್ಲಿ ಬಿಕ್ಕಟ್ಟನ್ನು ಅಂತಿಮಗೊಳಿಸುವ ಮುಂಚಿತವಾಗಿ ಪಕ್ಷವು ಈ ಕ್ರಮಕೈಗೊಂಡಿದೆ.
ಅದಾಗ್ಯೂ, ಅಚ್ಯುತಾನಂದನ್ ಅವರು ಕೇರಳ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಬಹುಕೋಟಿ ಎಸ್ಎನ್‌ಸಿ ಲವಲಿನ್ ಹಗರಣದಲ್ಲಿ ಪಾಲ್ಗೊಂಡಿದ್ದಾರೆಂಬ ಆರೋಪ ಹೊತ್ತಿರುವ ಅಚ್ಯುತಾನಂದನ್ ಅವರೊಂದಿಗೆ ಗುದ್ದಾಟಕ್ಕಿಳಿದಿರುವ ಪಿನರಾಯಿ ವಿಜಯನ್ ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.
ಕೇರಳ ಘಟಕದಲ್ಲಿರುವ ಪಕ್ಷೀಯ ಭಿನ್ನಮತದ ಅಗ್ನಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಶನಿವಾರ ಸಾಯಂಕಾಲ ನಡೆದ ಸಭೆಯಲ್ಲಿ ಅಚ್ಯುತಾನಂದನ್ ಅವರನ್ನು ವಜಾಗೊಳಿಸುವ ಶಿಫಾರಸ್ಸನ್ನು ಮಂಡಿಸಲಾಗಿತ್ತು.
ಲವಲಿನ್ ಹಗರಣವು ಪಕ್ಷದ ಘನತೆಗೆ ಹಾನಿಯುಂಟಾಗಿದೆ ಎಂದು ಅಚ್ಯುತಾನಂದನ್ ಹೇಳಿದ್ದರು. ಇದೇ ವೇಳೆ, ಸಿಎಂ ಹೇಳಿಕೆಯು ಪಕ್ಷದ ಸದಸ್ಯರಿಗೆ ನೋವುಂಟುಮಾಡಿದೆ ಎಂದು ಹೇಳಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಕರೆನೀಡಿದ್ದರು. |