ಜೈಲಿನಲ್ಲಿ ತನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿರುವ ಮಾಲೆಗಾಂವ್ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು, ತಾನು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.ಮಾಧ್ಯಮಗಳಿಗೆ ಪತ್ರಬರೆದಿರುವ ಸಿಂಗ್ "ಪೊಲೀಸರು, ಆಸ್ಪತ್ರೆ ಹಾಗೂ ಜೈಲಿನ ಅಧಿಕಾರಿಗಳು ತನ್ನನ್ನು ನಡೆಸಿಕೊಳ್ಳುವ ರೀತಿಯಿಂದ ರೋಸಿಹೋಗಿದ್ದು, ತನ್ನನ್ನು ಇರಿಸಿರುವ ಬೈಕುಲ್ಲಾ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.ಅನಾರೋಗ್ಯಪೀಡಿತಳಾಗಿದ್ದ ತನ್ನನ್ನು ಜೆ.ಜೆ. ಆಸ್ಪತ್ರೆಗೆ ಅಂಬ್ಯುಲೆನ್ಸ್ ಬದಲಿಗೆ ಪೊಲೀಸ್ ಜೀಪಿನಲ್ಲಿ ಕರೆದೊಯ್ಯಲಾಯಿತು ಎಂದು ಅವರು ಜುಲೈ 11ರ ದಿನಾಂಕದ ಪತ್ರದಲ್ಲಿ ದೂರಿದ್ದಾರೆ." ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ನಂತಹ ಉಗ್ರನನ್ನು ಜೈಲಿನಲ್ಲಿ ವಿಐಪಿಯಂತೆ ನಡೆಸಿಕೊಳ್ಳಲಾಗುತ್ತದೆ. ಆದರೆ ಪ್ರಜ್ಞಾರನ್ನು ಅವರ ಹಿಂದುತ್ವ ಸಿದ್ಧಾಂತಕ್ಕಾಗಿ ಶಿಕ್ಷಿಸಲಾಗುತ್ತಿದ್ದು ಇದು ವಿಚಿತ್ರವಾಗಿದೆ" ಎಂದು ಪ್ರಜ್ಞಾರ ವಕೀಲ ನವೀನ್ ಕೋಮಲ್ ಹೇಳಿದ್ದಾರೆ.ತನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲದಿದ್ದರೂ, ತನ್ನನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ವು ತಪ್ಪಾಗಿ ಸಿಲುಕಿಸಿದೆ ಎಂದೂ ಸಾಧ್ವಿ ಆಪಾದಿಸಿದ್ದಾರೆ. |