ತನ್ನ ಅಣು ಯೋಜನೆಗೆ ಭಾರತವು ಅಣು ಪೂರೈಕೆ ಸಮೂಹ(ಎನ್ಎಸ್‌ಜಿ)ದಿಂದ ಸಂಪೂರ್ಣ ವಿನಾಯಿತಿ ಪಡೆದಿದೆ ಮತ್ತು "ಜಿ8 ಸಮೂಹದ ಹೇಳಿಕೆಯಿಂದ ನಾವು ಕಳವಳಗೊಂಡಿಲ್ಲ" ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಸೋಮವಾರ ಹೇಳಿದ್ದಾರೆ.ಅಣು ಪ್ರಸರಣ ತಡೆ ನೀತಿಗೆ(ಎನ್‌ಪಿಟಿ) ಸಹಿಹಾಕದ ರಾಷ್ಟ್ರಗಳಿಗೆ ಅಣುಸಂವರ್ಧನೆ ಮತ್ತು ಮರುಪ್ರಕ್ರಿಯೆ ವಸ್ತುಗಳ ವರ್ಗಾವಣೆಗೆ ನಿಷೇಧ ಹೇರಲು ಇತ್ತೀಚೆಗೆ ಇಟಲಿಯಲ್ಲಿ ಜರುಗಿದ ಜಿ8 ರಾಷ್ಚ್ರಗಳ ಸಮೂಹವು ಮಸೂದೆ ಅಂಗೀಕರಿಸಿದ ಬಳಿಕ ಅವರು ರಾಜ್ಯ ಸಭೆಯಲ್ಲಿ ಮಾತನಾಡುತ್ತಿದ್ದರು.ಎನ್‌ಪಿಟಿಗೆ ಸಹಿಮಾಡದ ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಸೇರಿದೆ.ಭಾರತಕ್ಕೆ ಅಣುವಸ್ತುಗಳು, ಇಂಧನ ಹಾಗೂ ತಂತ್ರಜ್ಞಾನವನ್ನು ಮಾರಾಟ ಮಾಡಲು ಕಳೆದ ವರ್ಷ ಎನ್‌ಎಸ್‌ಜಿಯು ತನ್ನ ರಫ್ತು ನಿಯಮಗಳಿಗೆ ವಿನಾಯಿತಿ ನೀಡಿತ್ತು. ಆಗಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ಅವರು ಈ ಕುರಿತು ಎನ್‌ಎಸ್‌ಜಿ ಸದಸ್ಯ ರಾಷ್ಟ್ರಗಳ ಮನಒಲಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. |