ಆಂತರಿಕ ಭಿನ್ನತೆ, ಹೆಚ್ಚುತ್ತಿರುವ ನಿರುದ್ಯೋಗ, ಹಾಗೂ ಹಣಕಾಸು ಸಮಸ್ಯೆಗಳಿಂದ ಕಂಗೆಟ್ಟಿರುವ ಚೀನವು ಅಲ್ಲಿನ ಕಮ್ಯೂನಿಸ್ಟ್ ದೊರೆಗಳನ್ನು ಆಂತಕ್ಕೆ ತಳ್ಳಿದ್ದು, ತನ್ನದೇ ಪ್ರಜೆಗಳ ಗಮನವನ್ನು ಬೇರೆಡೆ ಹರಿಸಲು ಕಮ್ಯೂನಿಸ್ಟ್ ರಾಷ್ಟ್ರವು 2012ರೊಳಗಾಗಿ ಭಾರತದ ಮೇಲೆ ದಾಳಿ ನಡೆಸಬಹುದು ಎಂಬುದಾಗಿ ರಕ್ಷಣಾ ತಜ್ಞರೊಬ್ಬರು ಅಭಿಪ್ರಾಯಿಸಿದ್ದಾರೆ.
"ಚೀನವು ಭಾರತದ ಮೇಲೆ 2012ರೊಳಗೆ ದಾಳಿ ನಡೆಸಬಹುದು. ಚೀನವು ಭಾರತಕ್ಕೆ ಕೊನೆಯ ಪಾಠಕಲಿಸಲು ಹಲವು ಕಾರಣಗಳಿದ್ದು, ಈ ಮೂಲಕ ಈ ಶತಮಾನದಲ್ಲಿ ಏಶ್ಯಾದಲ್ಲಿ ತನ್ನ ಹಿರಿಮೆಯನ್ನು ಸ್ಥಾಪಿಸಲು ಮುಂದಾಗಲಿದೆ" ಎಂಬುದಾಗಿ ದಿ ಇಂಡಿಯನ್ ಡಿಫೆನ್ಸ್ ರಿವ್ಯೂವಿನ ಸಂಪಾದಕ ಭಾರತ್ ವರ್ಮಾ ಹೇಳಿದ್ದಾರೆ.
ಆರ್ಥಿಕ ಹಿಂಸರಿತವು ಚೀನದ ನಿರ್ಯಾತ ಮಳಿಗೆಗಳನ್ನು ಮುಚ್ಚಿದ್ದು ಇದರಿಂದಾಗಿ ಹಿಂದೆಂದೂ ಕಾಣದಂತಹ ಆಂತರಿಕ ಸಾಮಾಜಿಕ ಅಶಾಂತಿ ಸೃಷ್ಟಿಯಾಗಿದ್ದು ಇದು ಸಮಾಜದ ಮೇಲಿನ ಕಮ್ಯೂನಿಸ್ಟ್ ಹಿಡಿತದ ಮೇಲೆ ತೀವ್ರ ಬೆದರಿಕೆಯೊಡ್ಡಿದೆ ಎಂದು ವರ್ಮಾ ಹೇಳಿದ್ದಾರೆ.
ಇದಲ್ಲದೆ, ಹೆಚ್ಚುತ್ತಿರುವ ನಿರುದ್ಯೋಗ, ಬಿಲಿಯನ್‌ಗಟ್ಟಲೆ ಡಾಲರುಗಳ ಹೂಡಿಕೆಯ ಹಣೆಬರಹ, ವಿದೇಶಿ ವಿನಿಮಯ ಮೀಸಲು ಕುಸಿತ, ಹೆಚ್ಚುತ್ತಿರುವ ಆಂತರಿಕ ಭಿನ್ನತೆ ಇವುಗಳು ಇತರ ಪ್ರಮುಖ ಕಾರಣಗಳು ಎಂಬುದಾಗಿ ವರ್ಮಾ ಹೇಳಿದ್ದಾರೆ.
ಇದಲ್ಲದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಫ್ಘಾನ್-ಪಾಕ್ ನೀತಿಯು ಬುದ್ಧಿವಂತಿಕೆಯಿಂದ ಕಳ್ಳನನ್ನು ಹಿಡಿಯಲು ಕಳ್ಳನನ್ನು ನೇಮಿಸಲಾಗಿದ್ದು, ಇವೆಲ್ಲವೂ ಚೀನದ ಮೇಲೆ ಪರಿಣಾಮ ಬೀರಲಿದೆ. ಇದಲ್ಲದೆ ಇದೀಗಾಗಲೇ ಚಲಿಸಿಹೋಗಿರುವ ಚೀನಗೆ ಭಾರತ ಮತ್ತು ಅಮೆರಿಕ ಹಾಗೂ ಇತರ ಪಾಶ್ಚಾತ್ಯ ರಾಷ್ಟ್ರಗಳೊಡನೆ ಹೆಚ್ಚುತ್ತಿರುವ ಮಿತ್ರತ್ವವೂ ತಲೆನೋವು ತಂದಿದೆ. ಇದು ಭಾರತವು ತಾಂತ್ರಿಕ ಗರಿಮೆ ಹೊಂದಲು ಸಹಾಯಕವಾಗಿದೆ.
ಈ ಎಲ್ಲ ಕಾರಣ ಮತ್ತು ಕಳವಳಗಳಿಗೆ ಶಾಂತಿಪ್ರಿಯ ಭಾರತದ ಮೇಲೆ ದಂಡೆತ್ತಿ ಹೋಗಿ ತನ್ನ ಬಹು ವ್ಯೂಹಾತ್ಮಕ ಉದ್ದೇಶಗಳನ್ನು ಜಯಿಸಿ ಬೇಳೆ ಬೇಯಿಸಿಕೊಳ್ಳುವುದು ಅದರ ಉದ್ದೇಶವಾಗಲಿದೆ ಎಂದು ಸಂಪಾದಕೀಯದಲ್ಲಿ ವಿಶ್ಲೇಷಿಸಲಾಗಿದೆ. |