ಕಾಂಗ್ರೆಸ್‌ನಲ್ಲಿ ರಾಜಕೀಯ ಹಿನ್ನೆಲೆಯಿಂದ ಬಂದವರಿಗೆ ಮಾತ್ರ ಮಣೆಹಾಕಲಾಗುತ್ತದೆ ಎಂದು ಹೇಳಿರುವ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ರಾಹುಲ್ ಗಾಂಧಿ ಮುಖದ ಚಂದ ನೋಡಿ ಯುವಕರು ಮೋಸ ಹೋಗದಿರಿ ಎಂದು ಹೇಳಿದ್ದಾರೆ.ಬಿಜೆಪಿಯ ಯುವ ಸಂಸದರು ಮತ್ತು ಪಕ್ಷದ ಯುವ ಘಟಕದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸಿಗರು ಮೊದಲು ಊರಿನಲ್ಲಿ ಪಕ್ಷದ ಹಾಗೂ ಪಕ್ಷದ ಹಿರಿಯ ನಾಯಕರ ಪೋಸ್ಟರ್ ಅಂಟಿಸುತ್ತಾರೆ. ಅದಾದಮೇಲೆ ರಾಹುಲ್ ಅವರಂತಹ ಚಾಕೋಲೇಟ್ ಹೀರೋಗಳ ಪೊಸ್ಟರ್ ಅಂಟಿಸುತ್ತಾರೆ. ಸಹಜವಾಗಿಯೇ ಯುವಕರು ಅವರತ್ತ ಆಕರ್ಷಿತರಾಗಿ ಕಾಂಗ್ರೆಸ್ ಸೇರುತ್ತಾರೆ ಎಂದು ವಿಶ್ಲೇಷಿಸದರು.ಆದರೆ ಹೀಗೆ ಕಾಂಗ್ರೆಸ್ ಸೇರಿದವರಿಗೆ ಅಲ್ಲಿ ಯಾವುದೇ ಅವಕಾಶ ಸಿಗುವುದಿಲ್ಲ. ಕೇವಲ ರಾಜಕೀಯ ಹಿನ್ನೆಲೆ ಉಳ್ಳವರ ಮಕ್ಕಳು ಮಾತ್ರ ಅವಕಾಶ ಪಡೆಯುತ್ತಾರೆ. ಆದರೆ ಬಿಜೆಪಿಯಲ್ಲಿ ಕೊಳಗೇರಿಗಳಿಂದ ಬಂದವರೂ ರಾಜಕೀಯದಲ್ಲಿ ಉನ್ನತ ಸ್ಥಾನ ಏರಬಹುದು ಎಂದು ಸುಷ್ಮಾ ಹೇಳಿದರು.ಕಾಂಗ್ರೆಸ್‌ನಲ್ಲಿ ಪ್ರಸಕ್ತ ಸಚಿವರಾಗಿರುವ ಯುವ ಸಚಿವರೆಲ್ಲರೂ ಮಾಜಿ ಸಚಿವರ ಮಕ್ಕಳು ಅಥವಾ ರಾಜಕೀಯ ಹಿನ್ನೆಲೆಯಿಂದ ಬಂದವರಾಗಿದ್ದಾರೆ. |