ಆರು ಮಂದಿಯನ್ನು ಬಲಿತೆಗೆದುಕೊಂಡಿರುವ ಮೆಟ್ರೊ ಮೇಲ್ಸೇತುವೆ ಕುಸಿತ ಪ್ರಕರಣದ ತನಿಖೆಗಾಗಿ ದೆಹಲಿ ಮೆಟ್ರೊ ನಾಲ್ವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿದೆ.
ನಾಲ್ವರು ಸದಸ್ಯರ ಸಮಿತಿಯು ಅವಘಡದ ಕುರಿತು ತನಿಖೆ ನಡೆಸಿ ಹತ್ತುದಿನಗಳೊಳಗಾಗಿ ವರದಿ ಸಲ್ಲಿಸಲಿದೆ ಎಂದು ದೆಹಲಿ ಮೆಟ್ರೊ ಆಡಳಿತ ನಿರ್ದೇಶಕ ಇ. ಶ್ರೀಧರನ್ ಹೇಳಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶ್ರೀಧರನ್ ಅವರು ಸರ್ಕಾರದ ಮನವೊಲಿಕೆ ಹಿನ್ನೆಲೆಯಲ್ಲಿ ತನ್ನ ರಾಜೀನಾಮೆ ಹಿಂತೆಗೆದು ಕೊಂಡಿದ್ದಾರೆ.
ಎ.ಕೆ. ನಾಗ್ಪಾಲ್ (ಸಿವಿಲ್ ಇಂಜಿನಿಯರ್ ಐಐಟಿ-ಡೆಲ್ಲಿ), ಬಿ.ಆರ್. ಬೋಸ್(ಸ್ಟ್ರಕ್ಚರಲ್ ಇಂಜಿನಿಯರ್-ಡಿಸಿಇ), ಸ್ಟೀವನ್ ಲಾರಿ(ಡಿಎಂಆರ್‌ಸಿಯ ಪ್ರಾಜೆಕ್ಟ್ ಡೈರೆಕ್ಟರ್) ಮಚ್ಚು ರಾಜನ್ ಕತಾರಿಯಾ (ಡಿಸೈನ್ ಡಿಎಂಆರ್‌ಸಿ ಮುಖ್ಯಸ್ಥ) ಅವರುಗಳ ಸಮಿತಿಯ ಸದಸ್ಯರಾಗಿದ್ದಾರೆ. |