ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಪ್ರವಾದಿ ಇಂದಿರುತ್ತಿದ್ದರೆ ಡಬ್ಲ್ಯುಟಿಒ ದಾಳಿ ನಡೆಯುತ್ತಿರಲಿಲ್ಲ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಪ್ರವಾದಿ ಇಂದಿರುತ್ತಿದ್ದರೆ ಡಬ್ಲ್ಯುಟಿಒ ದಾಳಿ ನಡೆಯುತ್ತಿರಲಿಲ್ಲ'
ಒಸಮಾ ಬಿನ್ ಲಾಡೆನ್‌ನ ಕಾರ್ಯಚಟುವಟಿಕೆಗಳು ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳಿಗೆ ಸರಿಬಹೊಂದುತ್ತಿಲ್ಲದ ಕಾರಣ ಆತ ನಮ್ಮ ಕಾಲದ ಅತಿದೊಡ್ಡ ಭಯೋತ್ಪಾದಕ ಎಂದು ಭಾರತೀಯ ಮುಸ್ಲಿಂ ಧಾರ್ಮಿಕ ನಾಯಕರೊಬ್ಬರು ಹೇಳಿದ್ದಾರೆ.

"ಪ್ರವಾದಿ ಮೊಹಮ್ಮದ್ ಹಾಗೂ ಅವರ ಅನುಯಾಯಿಗಳು ಇಸ್ಲಾಮಿನ ವೈರಿಗಳೊಂದಿಗೆ ಹೋರಾಡಿದಂತೆ ವೈರಿಗಳೊಂದಿಗೆ ಹೋರಾಡುವ ಬದಲಿಗೆ ಒಸಮಾ ಅಡಗಿ ಕುಳಿತಿದ್ದಾನೆ" ಎಂದು ಕಿಚ್ಚೋರ್ ಮೂಲದ ಆಧ್ಯಾತ್ಮಿಕ ಪ್ರತಿಷ್ಠಾನದ ಹಜ್ರತ್ ಸಯೀದ್ ಮುಹಮ್ಮದ್ ಜಿಲಾನಿ ಅಶ್ರಫ್ ಅವರು ಪ್ರತಿಷ್ಠಾನದ ಆಫ್ರಿಕಾದ ಮುಖ್ಯಕಚೇರಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.

ಒಂದೊಮ್ಮೆ ಪ್ರವಾದಿಯವರು ಇಂದು ಇರುತ್ತಿದ್ದರೆ, ಅಮೆರಿಕದ ಅವಳಿಕಟ್ಟಡಗಳ ಮೇಲೆ ಬಾಂಬ್ ದಾಳಿ ಹಾಗೂ ಅಮಾಯಕರನ್ನು ಕೊಲ್ಲುವ ಇತರ ಕೃತ್ಯಗಳಿಗೆ ಖಂಡಿತ ಆದೇಶಿಸುತ್ತಿರಲಿಲ್ಲ ಎಂದು ಜಿಲಾನಿ ಹೇಳಿದರು.

ಜಿಹಾದ್ ವೇಳೆ ಚರ್ಚುಗಳು ಮತ್ತು ಇತರ ಧಾರ್ಮಿಕ ಹಾಗೂ ಐತಿಹಾಸಿಕ ಕಟ್ಟಡಗಳ ಧ್ವಂಸ ಸೇರಿದಂತೆ ಇತರ ರಾಷ್ಟ್ರಗಳ ಜನಜೀವನಕ್ಕೆ ಹಾನಿಯಾಗಬಾರದು ಎಂಬುದಾಗಿ ಪ್ರವಾದಿ ಅವರು ತಮ್ಮ ಪಡೆಗಳಿಗೆ ಆದೇಶಿಸಿದ್ದರು. ಜಿಹಾದ್ ಯಾವತ್ತೂ ಷರತ್ತುಬದ್ಧವಾಗಿದೆ ಎಂದು ಅವರು ಹೇಳಿದರು.

ಅಲ್-ಖಾಯ್ದಾ ನಾಯಕನನ್ನು ಇಸ್ಲಾಮಿನ ಆರಂಭಿಕ ದಿನಗಳ ನಾಯಕರೊಂದಿಗೆ ಹೋಲಿಸಿ ಘೋಷಣೆಗಳನ್ನು ಕೂಗಿದ ಯುರೋಪಿನ ಕೆಲವು ವಿದ್ಯಾರ್ಥಿಗಳೊಂದಿಗಿನ ತನ್ನ ಭೇಟಿಯನ್ನು ನೆನಪಿಸಿಕೊಂಡ ಅವರು, "ತಾವು ಘೋಷಣೆ ಕೂಗುತ್ತಿರುವ, ಪ್ರವಾದಿಯವರ ಮೊಮ್ಮಗ ಇಮಾಮ್ ಹುಸೇನ್ ಅವರ ಕುರಿತು ಏನಾದರೂ ಅಧ್ಯಯನ ನಡೆಸಿದ್ದೀರಾ ಎಂದು ನಾನು ಅವರು ಕೇಳಿದೆ. ಆತ ಇಸ್ಲಾಮಿ ವಿರೋಧಿ ಯಾಜಿದ್‌ನನ್ನು ಎದುರಿಸುವ ತನ್ನ ಪ್ರಕ್ರಿಯೆಯಲ್ಲಿ ತನ್ನ ಜೀವವನ್ನೇ ತ್ಯಾಗ ಮಾಡಿದ್ದ ಎಂಬುದಾಗಿ ಆ ವಿದ್ಯಾರ್ಥಿಗಳಿಗೆ ತಿಳಿಸಿದೆ" ಎಂದು ಹೇಳಿದರು.

"ಜಿಹಾದ್‌ನ ನಿಜವಾದ ಅರ್ಥವನ್ನು ತಿಳಿದುಕೊಳ್ಳಿ. ಇದು ಪ್ರತಿ ಮುಸ್ಲಿಮನಿಗೂ ಕಡ್ಡಾಯ. ಆದರೆ ಇಸ್ಲಾಮನ್ನು ಪ್ರನಿಧಿಸಲು ಇಂಗಿತ ಹೊಂದಿರುವ ಇಂದಿನ ಕೆಲವರು ಅನುಸರಿಸುವ ರೀತಿಯ ಜಿಹಾದನ್ನಲ್ಲ" ಎಂದು ಅವರು ಆ ವಿದ್ಯಾರ್ಥಿಗಳಿಗೆ ಹೇಳಿರುವುದಾಗಿ ಅವರು ನೆನಪಿಸಿಕೊಂಡರು.

ಇಸ್ಲಾಮಿನಲ್ಲಿ ಜಿಹಾದ್‌ನ ಗುರಿಯು ಧರ್ಮ, ಜಾತಿ, ಬಣ್ಣಗಳನ್ನು ಲೆಕ್ಕಿಸದೆ ಎಲ್ಲಾ ಜನರ ಹೃದಯಗಳನ್ನು ಶಾಂತಿಯುತ ರೀತಿಯಲ್ಲಿ ಗೆದ್ದು, ಅವರಲ್ಲಿ ಶಾಂತಿಯ ಸಂದೇಶವನ್ನು ತುಂಬುವುದು ಇಸ್ಲಾಮ್ ನಂಬುಗೆಯ ಪ್ರಮುಖ ಅಂಶವಾಗಿದೆ ಎಂದು ಜಿಲಾನಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೆಟ್ರೊ ದುರಂತ ತನಿಖೆಗೆ 4ಸದಸ್ಯರ ಸಮಿತಿ ನೇಮಕ
ಕಳ್ಳಭಟ್ಟಿ ದುರಂತಕ್ಕೆ ಮಿಥೆನಾಲ್ ಕಾರಣ
ರಾಹುಲ್ ಮುಖದ ಚಂದಕ್ಕೆ ಮಾರುಹೋಗದಿರಿ: ಸುಷ್ಮಾ
ಸಭರ್ವಾಲ್ ಕೊಲೆ: ಎಬಿವಿಪಿ ಕಾರ್ಯಕರ್ತರ ಖುಲಾಸೆ
ಕಂಗೆಟ್ಟ ಚೀನ ಭಾರತದ ಮೇಲೆ ದಂಡೆತ್ತಲಿದೆಯೇ?
ಮದುವೆಗೆ ಮುಂಚೆ ಕನ್ಯತ್ವ, ಗರ್ಭ ಪರೀಕ್ಷೆ!