ಎಸ್ಎಂಎಸ್ ರೂಪದಲ್ಲಿ ಕಾದಂಬರಿ ನಿಮ್ಮ ಮೊಬೈಲಿನೊಳಗೆ ಬರುವ ದಿನ ದೂರವಿಲ್ಲ. ಪ್ರಮುಖ ಪ್ರಕಟಣಾ ಸಂಸ್ಥೆಯೊಂದು ಕಾದಂಬರಿಯನ್ನು ಎಸ್ಎಂಎಸ್ ರೂಪದಲ್ಲಿ ಪ್ರಕರಟಿಸಲು ಮುಂದಾಗಿದೆ.
ಪಿಂಕಿವಿರಾನಿ ಅವರ 'ಡೆಫ್ ಹೆವನ್' ಭಾರತದ ಮೊದಲ ಸಾಹಿತ್ಯಿಕ ಸೆಲ್ ಕಾದಂಬರಿ ಹಾಗೂ ವಯಸ್ಕರ ಆಡಿಯೋ-ಮೊಬೈಲ್ ಪುಸ್ತಕವಾಗಲಿದೆ ಎಂದು ಹಾರ್ಪರ್ ಕೋಲಿನ್ಸ್ ಇಂಡಿಯಾ ಹೇಳಿದೆ.
ಈ ಕಾದಂಬರಿಯು 90 ಎಸ್ಎಂಎಸ್‌ಗಳಲ್ಲಿ ಲಭ್ಯವಾಗಲಿದೆ ಮತ್ತು ಆಡಿಯೋ-ಮೊಬೈಲ್ ಪುಸ್ತಕವನ್ನು ರಿಲಯನ್ಸ್ ಮೊಬೈಲ್‌ಗೆ ಎರಡು ಕ್ಷಿಪ್ರ ಅವಧಿಯಲ್ಲಿ ಡೌನ್‍ಲೋಡ್ ಮಾಡಬಹುದಾಗಿದೆ.
"ಪ್ರಕಟಕರಾಗಿ ನಾವು ಯಾವಾಗಲು ಹೊಸ ಆವಿಷ್ಕಾರಗಳ ಮೂಲಕದ ವಿಸ್ತರಣೆಗಾಗಿ ಎದುರು ನೋಡುತ್ತಿರುತ್ತೇವೆ ಮತ್ತು ಸಂಬಂಧಿತ ಮಾಧ್ಯಮಗಳನ್ನು ಬಳಸಿಕೊಳ್ಳುತ್ತೇವೆ. ಹಾಗಾಗಿ ಇದು ಕ್ಷೇತ್ರದಲ್ಲಿರುವ ಹಲವು ಪ್ರಯೋಗಗಳ ಅಗ್ರಸ್ಥಾನ ಪಡೆಯುತ್ತದೆ" ಎಂದು ಹಾರ್ಪರ್ ಕಾಲಿನ್ಸ್‌ನ ಸಿಇಓ ಪಿ.ಎಂ. ಸುಕುಮಾರ್ ಹೇಳಿದ್ದಾರೆ. |