ಅತ್ಯಾಚಾರ ಬಲಿಪಶು ಹುಡುಗಿಯೊಬ್ಬಳು ಸಡಿಲ ನಡತೆಯ ಹುಡುಗಿ ಎಂದು ತೀರ್ಮಾನಿಸಿರುವ ಸುಪ್ರೀಂಕೋರ್ಟ್, ಈ ಕಾರಣದ ಆಧಾರದಿಂದ ಆರೋಪಿಯನ್ನು ಖುಲಾಸೆಗೊಳಿಸಿದೆ.
"ಬಲಿಪಶು ಲೈಂಗಿಕಕ್ರಿಯೆಗೆ ಒಗ್ಗಿದಂತೆ ಕಾಣುತ್ತಿದ್ದು, ಆಕೆಯೊಬ್ಬ ಲಂಪಟಳು. ತನಗೆ ಗೊತ್ತಿರುವ ಪುರಷರೊಂದಿಗೆ ಮುಕ್ತವಾಗಿ ಅನಂದ ಅನುಭವಿಸಲು ಆಕೆಗೆ ಅಡ್ಡಿಇರಲಿಲ್ಲ" ಎಂಬುದಾಗಿ ನ್ಯಾಯಮೂರ್ತಿಗಳಾದ ಮುಕುಂದಾಕಮ್ ಶರ್ಮಾ ಮತ್ತು ಬಿ.ಎಸ್. ಚೌವಾಣ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಮೂಸ ಎಂಬ ಆರೋಪಿ ಗುವಾಹತಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದಿರುವ ನ್ಯಾಯಪೀಠ ಈ ತೀರ್ಪು ನೀಡಿದೆ.
ಅದೊಂದು ಸಮ್ಮತಿಯ ಲೈಂಗಿಕ ಕ್ರಿಯೆಯಾಗಿತ್ತು ಎಂದು ಮೂಸ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದ. ವಿಚಾರಣಾ ನ್ಯಾಯಾಲಯವು ಆತನಿಗೆ 10 ವರ್ಷಗಳ ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ಶಿಕ್ಷೆಯನ್ನು ನಾಲ್ಕು ವರ್ಷಗಳಿಗೆ ಇಳಿಸಿತ್ತು. ಈ ಎರಡೂ ತೀರ್ಪುಗಳನ್ನು ಒಪ್ಪದ ಉಚ್ಚ ನ್ಯಾಯಾಲಯವು ತನ್ನ ತೀರ್ಪಿನ ವೇಳೆಗೆ "ಬಲಿಪಶುವು ಸಡಿಲ ನಡತೆಯವಳೆಂದು ಕಾಣುತ್ತದೆ" ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ತಾನು ಅಪ್ರಾಪ್ತಳಾಗಿದ್ದು, ಲೈಂಗಿಕಕ್ರಿಯೆಗೆ ಸಮ್ಮತಿ ನೀಡಲಿಲ್ಲ ಎಂಬ ಬಲಿಪಶುವಿನ ವಾದವನ್ನು ನ್ಯಾಯಮೂರ್ತಿಗಳು ತಳ್ಳಿಹಾಕಿದ್ದಾರೆ. ಪೊಲೀಸ್ ತನಿಖೆ ಹಾಗೂ ವಿಚಾರಣಾ ನ್ಯಾಯಾಲಯದಲ್ಲ ಆಕೆ ನೀಡಿರುವ ಹಲವಾರು ವೈರುಧ್ಯಕರ ಹೇಳಿಕೆಯತ್ತ ಬೆಟ್ಟು ಮಾಡಿದ್ದಾರೆ. |