ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ನಾವಿಬ್ಬರು ನಮಗಿಬ್ಬರು' ನೀತಿಗೆ ರಾಜ್ಯಗಳ ಚಿತ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ನಾವಿಬ್ಬರು ನಮಗಿಬ್ಬರು' ನೀತಿಗೆ ರಾಜ್ಯಗಳ ಚಿತ್ತ
ನವದೆಹಲಿ: ದಂಪತಿಗಳಿಗೆ ಎರಡೇ ಮಕ್ಕಳ ಸಿದ್ಧಾಂತಕ್ಕೆ ಕರ್ನಾಟಕ ಸೇರಿದಂತೆ ಹನ್ನೊಂದು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ಒಲವು ತೋರಿವೆ. ಸರ್ಕಾರವು 2000ನೇ ಇಸವಿಯಲ್ಲಿ ರೂಪಿಸಲಾಗಿರುವ ಒಟ್ಟು ಫಲವತ್ತತೆ ದರವನ್ನು ರಾಷ್ಟ್ರೀಯ ಜನಸಂಖ್ಯಾ ನೀತಿಯ 2010ರ ವೇಳೆಗೆ 2ಕ್ಕೆ ತಗ್ಗಿಸಲು ಸರ್ಕಾರ ಗುರಿ ಹಮ್ಮಿಕೊಂಡಿದೆ. ಇದಕ್ಕೆಇನ್ನೂ ಒಂದುವರ್ಷವಿದ್ದರೂ ಆಂಧ್ರಪ್ರದೇಶ, ಡೆಲ್ಲಿ, ಗೋವಾ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್, ಸಿಕ್ಕಿಂ, ತಮಿಳ್ನಾಡು ಮತ್ತು ಪಶ್ಚಿಮ ಬಂಗಾಳ ಹಾಗೂ ಅಂಡಮಾನ್ ನಿಕೋಬಾರ್, ಚಂಢೀಗಡ ಮತ್ತು ಪುದುಚೇರಿಗಳು ಈ ಗುರಿಯನ್ನು ಇದೀಗಾಗಲೇ ತಲುಪಿದ್ದಾರೆ. (ಒಟ್ಟು ಫಲವತ್ತತೆ ದರವು ಒಬ್ಬ ಮಹಿಳೆಯು ತನ್ನ ಫಲವತ್ತತೆ ಕಾಲದಲ್ಲಿ ಹಡೆಯಬಹುದಾದ ಮಕ್ಕಳ ಸಂಖ್ಯೆ)

"ಮಕ್ಕಳ ನಡುವೆ ಅಂತರ, ವಿವಾಹದ ವಯಸ್ಸು, ವರ್ತನೆಯಲ್ಲಿ ಬದಲಾವಣೆ, ಶಿಕ್ಷಣ, ಉತ್ತಮ ಆರೋಗ್ಯಪಾಲನೆ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು ಈ ಪ್ರಗತಿಯ ಹಿಂದಿನ ಕಾರಣಗಳು" ಎಂದು ಆರೋಗ್ಯ ಸಚಿವಾಲಯದ ಜತೆಕಾರ್ಯದರ್ಶಿ ಅಮರ್‌ಜಿತ್ ಸಿನ್ಹಾ ತಿಳಿಸಿದ್ದಾರೆ. ವ್ಯಾಸೆಕ್ಟಮಿ, ಟ್ಯುಬೆಕ್ಟಮಿಯಂತಹ ಕುಟುಂಬ ಯೋಜನಾ ಕ್ರಮಗಳನ್ನು ವ್ಯಾಪಕವಾಗಿ ಸ್ವೀಕರಿಸಲಾಗಿದೆ ಎಂದು ಇತರ ಅಧಿಕಾರಿಗಳು ಹೇಳಿದ್ದಾರೆ.

ಉಳಿದಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಬಿಹಾರ್, ಮತ್ತು ಮಧ್ಯಪ್ರದೇಶಗಳು ಈ ಒಟ್ಟಾರೆ ಫಲವತ್ತತೆ ಗುರಿಯನ್ನು ತಲುಪಲು ಇನ್ನೂ 15ರಿಂದ 20 ವರ್ಷಗಳು ಬೇಕಾಗಬಹುದು ಎಂಬುದಾಗಿ ಜನಸಂಖ್ಯಾ ಅಂದಾಜಿನ ರಾಷ್ಟ್ರೀಯ ಆಯೋಗವು ಹೇಳಿದೆ.

ಪ್ರಸಕ್ತ ಅತಿಹೆಚ್ಚು ಜನಸಂಖ್ಯೆಯ ರಾಷ್ಟ್ರ ಎಂದು ಪರಿಗಣಿತವಾಗಿರುವ ಚೀನವನ್ನು ಭಾರತ 2030ರ ವೇಳೆಗೆ ಹಿಂದಿಕ್ಕಲಿದ್ದು, ಇದರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.22ರಷ್ಟನ್ನು ಚೀನ ಒಂದೇ ನೀಡಲಿದೆ ಎಂದು ಅಂಜಾಜಿಸಲಾಗಿದೆ. ಮಿಕ್ಕಂತ ಬಿಹಾರ್, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳು ಒಟ್ಟು ಸೇರಿ ಶೇ.22ರ ಕೊಡುಗೆ ನೀಡಲಿದ್ದರೆ, ದಕ್ಷಿಣದ ನಾಲ್ಕು ರಾಜ್ಯಗಳಾದ ಆಂಧ್ರ, ಕರ್ನಾಟಕ, ಕೇರಳ ಮತ್ತು ತಮಿಳ್ನಾಡುಗಳು ಒಟ್ಟು ಶೇ.13ರಷ್ಟು ಕೊಡುಗೆ ನೀಡಲಿವೆ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಡಿಲನಡತೆ: ಅತ್ಯಾಚಾರ ಆರೋಪಿ ಖುಲಾಸೆ
ಈಗ ನಿಮ್ಮ ಮೊಬೈಲ್‌ನಲ್ಲಿ ಎಸ್ಎಂಎಸ್ ಕಾದಂಬರಿ
'ಪ್ರವಾದಿ ಇಂದಿರುತ್ತಿದ್ದರೆ ಡಬ್ಲ್ಯುಟಿಒ ದಾಳಿ ನಡೆಯುತ್ತಿರಲಿಲ್ಲ'
ಮೆಟ್ರೊ ದುರಂತ ತನಿಖೆಗೆ 4ಸದಸ್ಯರ ಸಮಿತಿ ನೇಮಕ
ಕಳ್ಳಭಟ್ಟಿ ದುರಂತಕ್ಕೆ ಮಿಥೆನಾಲ್ ಕಾರಣ
ರಾಹುಲ್ ಮುಖದ ಚಂದಕ್ಕೆ ಮಾರುಹೋಗದಿರಿ: ಸುಷ್ಮಾ