ಭಾರತದೊಂದಿಗಿನ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನ ಬಂಕರ್ ನಿರ್ಮಾಣ ಮಾಡುತ್ತಿದೆ ಎಂಬುದಾಗಿ ಬಿಎಸ್ಎಫ್ ಅಧಿಕಾರಿಗಳು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನವು ಕಾಂಕ್ರೀಟ್ ಬಂಕರ್‌ಗಳನ್ನು ಮತ್ತು ವಿಕ್ಷಣಾ ಗೋಪುರಗಳನ್ನು ನಿರ್ಮಿಸುತ್ತಿದೆ ಎಂಬುದಾಗಿ ಬಿಎಸ್ಎಫ್ ವಿಶೇಷ ಪ್ರಧಾನ ನಿರ್ದೇಶಕ ಯು.ಕೆ. ಬನ್ಸಾಲ್ ಅವರು ಹೇಳಿರುವುದಾಗಿ ಸಿಎನ್ಎನ್-ಐಬಿಎನ್ ವಾಹಿನಿ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಗಡಿಯಲ್ಲಿನ ಚಟುವಟಿಕೆಯು ರಕ್ಷಣಾ ತಂತ್ರವಿರಬಹುದಾದರೂ ಭಾರತವು, ತನ್ನ ನೆರೆ ರಾಷ್ಟ್ರ ಯಾವುದೇ ಕುಕೃತ್ಯಗಳನ್ನು ನಡೆಸಿದರೂ ಅದನ್ನು ತಟಸ್ಥಗೊಳಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಬನ್ಸಾಲ್ ಹೇಳಿದ್ದಾರೆ.
ಕೆಲವು ವಲಯಗಳಲ್ಲಿ ಪಾಕಿಸ್ತಾನದ ರೇಂಜರ್‌ಗಳು ಭಾರತದ ಆಕ್ಷೇಪವನ್ನು ಮನ್ನಿಸಿ ನಿರ್ಮಾಣವನ್ನು ನಿಲ್ಲಿಸಿದ್ದರೂ, ಮತ್ತೆ ಕೆಲವು ಪ್ರದೇಶಗಳಲ್ಲಿ ಬಂಕರ್ ಚಟುವಟಿಕೆಗಳು ತಡೆಯಿಲ್ಲದೆ ಸಾಗಿದೆ ಎಂದವರು ಹೇಳಿದ್ದಾರೆ. |