ಇತ್ತೀಚೆಗೆ ನಡೆದ ಮಹಾಚುನಾವಣೆಯಲ್ಲಿ ಬಳಸಲಾಗಿರುವ ಮತಯಂತ್ರಗಳಲ್ಲಿ ದೋಷವಿದ್ದ ಕಾರಣ ಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಲಾಗಿದೆ.
ಶಿವಸೇನೆಯ ಮೋಹನ್ ರಾವ್ಲೆ ಹಾಗೂ ನವಲ್. ಕೆ ಝಾ ಅವರುಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಈ ಯಂತ್ರಗಳನ್ನು ಬಳಸಿ ದೇಶಾದ್ಯಂತ ಚುನಾವಣೆ ಪ್ರಕ್ರಿಯೆಯನ್ನೇ ಹಾಳುಗೆಡವಲಾಗಿದೆ ಎಂದು ದೂರಲಾಗಿದೆ.
ವಿದ್ಯುನ್ಮಾನ ಮತಯಂತ್ರ ನಂಬಲು ಸಾಧ್ಯವಿಲ್ಲ. ಅವುಗಳ ಸಾಫ್ಟ್‌ವೇರ್ ತಿದ್ದಿ ಅಕ್ರಮ ಮತ ಚಲಾಯಿಸಬಹುದಾಗಿದೆ. ಮತ್ತು ಒಂದು ಅಭ್ಯರ್ಥಿಗೆ ಚಲಾಯಿಸಿದ ಮತವನ್ನು ಇನ್ನೊಂದು ಅಭ್ಯರ್ಥಿಗೆ ಬದಲಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಹಳೆಯ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. |