ಮುಂಬೈ: ಮುಂಬೈಯಲ್ಲಿ ಸುರಿಯುತ್ತಿರುವ ಜಡಿಮಳೆಯು ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಮುಂಬೈಕಾರ್‌ಗಳು ಮುಂಗಾರು ಮಳೆಯಲ್ಲಿ ತೋಯ್ದು ಮದ್ದೆಯಾಗಿದ್ದಾರೆ.
ಅದಾಗ್ಯೂ, ಮಳೆಯಿಂದಾಗಿ ರಸ್ತೆ ಹಾಗೂ ರೈಲು ಸಂಚಾರಕ್ಕೆ ಅಡ್ಡಿಯಾಗಿಲ್ಲ. ಮತ್ತು ರಸ್ತೆಗಳಲ್ಲಿ ನೀರು ಕಟ್ಟಿ ನಿಂತಿಲ್ಲ. ವಿಸಿಬಿಲಿಟಿ ಸಮಸ್ಯೆಯಿಂದಾಗಿ ವಿಮಾನಗಳು ಕೆಲವು ನಿಮಿಷ ತಡವಾಗಿ ಹಾರಿದವು.
ಮಂಗಳವಾದ 8.30ರಿಂದ ಸುರಿದ 22 ಗಂಟೆಗಳ ಕಾಲದ ಮಳೆಯ ಪ್ರಮಾಣ 240.1 ಮಿಲಿಮೀಟರ್ ಎಂಬುದಾಗಿ ಹವಾಮಾನ ಇಲಾಖೆ ಹೇಳಿದೆ.
ಮುಂಬುರುವ 24 ಗಂಟೆಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದ ಅಲೆಗಳ ಅಬ್ಬರ ಹೆಚ್ಚಿರುವ ಕಾರಣ ಈ ಸೂಚನೆ ನೀಡಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಮಂಬೈ ನಗರ ಹಾಗೂ ಉಪನಗರಗಳಲ್ಲಿ ಗುಡುಗು ಮಿಂಚುಗಳಿಂದ ಕೂಡಿದ ಭಾರೀ ಮಳೆ ಬೀಳಲಿದೆ ಎಂದು ಇಲಾಖೆ ನಿರೀಕ್ಷಿಸಿದೆ. ಬಲವಾದ ಗಾಳಿಬೀಸುವ ಸಂಭವವೂ ಇದೆಯೆಂದು ಅದು ಮುನ್ನೆಚ್ಚರಿಕೆ ನೀಡಿದೆ.
|