ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಳಂಕಿತ ಸೇನಾಸಿಬ್ಬಂದಿಗಳನ್ನು ಕ್ರಿಮಿನಲ್ ಕೋರ್ಟಿನಲ್ಲಿ ವಿಚಾರಣೆ ನಡೆಸಬಹುದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಳಂಕಿತ ಸೇನಾಸಿಬ್ಬಂದಿಗಳನ್ನು ಕ್ರಿಮಿನಲ್ ಕೋರ್ಟಿನಲ್ಲಿ ವಿಚಾರಣೆ ನಡೆಸಬಹುದು
ಕೊಲೆ, ಅತ್ಯಾಚಾರದಂತಹ ಆರೋಪ ಎದುರಿಸುತ್ತಿರುವ ಸಶಸ್ತ್ರ ಪಡೆಗಳ ಸಿಬ್ಬಂದಿಗಳನ್ನು ಕೋರ್ಟ್ ಮಾರ್ಷಲ್ ಮುಖಾಂತರವೇ ವಿಚಾರಿಸಬೇಕೆಂದೇನಿಲ್ಲ, ಬದಲಿಗೆ ಕ್ರಿಮಿನಲ್ ಕೋರ್ಟ್‌ಗಳಲ್ಲೂ ವಿಚಾರಣೆ ನಡೆಸಬಹುದು ಎಂಬುದಾಗಿ ಮದ್ರಾಸ್ ಹೈಕೋರ್ಟ್ ಹೇಳಿದೆ.

ರಜೆಯ ಮೇಲಿದ್ದಾಗ ತನ್ನ ಪತ್ನಿಯನ್ನು ಕೊಲೆಗೈದಿರುವ ಆರೋಪ ಹೊತ್ತಿರುವ ಲಾನ್ಸ್ ಹವಾಲ್ದಾರ್ ಒಬ್ಬರು ಪ್ರಕರಣವನ್ನು ಸೇನಾನ್ಯಾಯಾಲಯಕ್ಕೆ ವರ್ಗಾಯಿಸಲು ನಿರಾಕರಿಸಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಪರಾಮರ್ಷೆ ಅರ್ಜಿಯನ್ನು ವಜಾ ಮಾಡುವ ವೇಳೆಗೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಕ್ರಿಮಿನಲ್ ಕೋರ್ಟ್ ಹಾಗೂ ಸೇನಾ ನ್ಯಾಯಾಲಯಗಳೆರಡೂ ಕ್ರಿಮಿಲ್ ಆರೋಪಗಳನ್ನು ವಿಚಾರಿಸುವ ಸಮವರ್ತಿ ನ್ಯಾಯವ್ಯಾಪ್ತಿಯನ್ನು ಹೊಂದಿವೆ ಎಂದು ನ್ಯಾಯಮೂರ್ತಿ ಎ. ಸೆಲ್ವಂ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.

ಅರ್ಜಿದಾರರು ಕಳೆದ ಆಗಸ್ಟ್ 25ರಂದು ಇಲ್ಲಿಗೆ ಸಮೀಪದ ಉಸಿಲಾಂಪಟ್ಟಿಯಲ್ಲಿನ ತನ್ನ ಊರಿಗೆ ರಜೆಯಲ್ಲಿ ತೆರಳಿದ್ದ ವೇಳೆ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತೊಂದು ದಾಳಿ: ಮುಂಬೈಯಲ್ಲಿ ಕಟ್ಟೆಚ್ಚರ
ಬಾಬ್ರಿಫೈಲ್‌: ಸಿಬಿಐ ತನಿಖೆಗೆ ಹೈಕೋ ಆದೇಶ
ಮುಂಬೈಯಲ್ಲಿ ಹೊರಗಿನವರಿಗೆ ಮನೆ ಬೇಡ: ಸೇನೆ ಒತ್ತಾಯ
ಅಜರ್-ಸಿಧು: ಟೀಮ್ ಮೇಟ್‌ಗಳೀಗ ಎದುರಾಳಿಗಳು
ತಮಿಳುಚಿತ್ರ ತೆರಿಗೆವಿನಾಯಿತಿ ವಿರೋಧಿ ಅರ್ಜಿ ವಜಾ
ಮುಂಬೈಯಲ್ಲೂ ಮುಂದುವರಿದ ವರುಣನ ಚೆಲ್ಲಾಟ