ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಕ್ಸಲರನ್ನು ಕೀಳಂದಾಜಿಸಿದ್ದೇವೆ: ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲರನ್ನು ಕೀಳಂದಾಜಿಸಿದ್ದೇವೆ: ಚಿದಂಬರಂ
"ನಾವು ಹಲವಾರು ವರ್ಷಗಳಿಂದ ನಕ್ಸಲರನ್ನು ಕೀಳಂದಾಜಿಸಿದ್ದೇವೆ" ಎಂದು ಪಿ. ಚಿದಂಬರಂ ನೇರವಾಗಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ನಕ್ಸರಲು ತಮ್ಮ ವ್ಯಾಪ್ತಿಯನ್ನು ವ್ಯಾಪಕವಾಗಿ ಹಬ್ಬಿಸಿಕೊಂಡಿದ್ದಾರೆ ಎಂದು ಹೇಳಿದ ಅವರು ಪೂರ್ಣಪ್ರಮಾಣದಲ್ಲಿ ನಕ್ಸಲರ ವಿರುದ್ಧ ಹೋರಾಡುವುದಾಗಿ ಭರವಸೆ ನೀಡಿದ್ದಾರೆ.

ಚತ್ತೀಸ್‌ಗಢದ ರಾಜ್‌ನಂದಗಾಂವ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪೊಲೀಸರ ನರಮೇಧ ಕುರಿತು ಪ್ರಶ್ನೆಗಳಿಗೆ ರಾಜ್ಯಸಭೆಯಲ್ಲಿ ಉತ್ತರಿಸುತ್ತಿದ್ದ ಅವರು "ವಿಷಾದವೆಂದರೆ, ನಾವು ಹಲವು ವರ್ಷಗಳಿಂದ ಎಡಪಂಥೀಯ ಉಗ್ರರ ಸವಾಲನ್ನು ಸೂಕ್ತವಾಗಿ ಅಂದಾಜಿಸಿಲ್ಲ. ನಾವು ನಕ್ಸಲರನ್ನು ಕೀಳಾಂದಿಜಿಸಿದ್ದೆವು ಎಂಬುದಾಗಿ ನನಗನಿಸುತ್ತದೆ" ಎಂದು ನುಡಿದರು.

ಮಾವೋವಾದಿಗಳನ್ನು ಮಟ್ಟ ಹಾಕಲು ಇದೀಗ ಸ್ಥಿರ ಪ್ರಯತ್ನಗಳ ಅವಶ್ಯಕತೆ ಇದೆ. ಮಾವೋವಾದಿ ಉಗ್ರರು ತಮ್ಮ ಪ್ರಭಾವಲಯವನ್ನು ವಿಸ್ತರಿಸಿಕೊಂಡಿದ್ದಾರೆ.

ಅವರು ಭದ್ರವಾಗಿ ಬೇರೂರಿದ್ದಾರೆ. ಇಂದು ಅವರು ಸರ್ಕಾರಕ್ಕೆ ತೀವ್ರ ಸವಾಲೋಡ್ಡುತ್ತಿದ್ದಾರೆ" ಎಂದು ಹೇಳಿದ್ದಾರೆ.

'ಕೆಂಪು ಉಗ್ರ'ರನ್ನು ಮಟ್ಟಹಾಕಲು ಉತ್ತಮವಾದ ಯೋಜನೆ, ಸಂಯೋಜನೆಯೊಂದಿಗೆ ವಿಶೇಷ ಪಡೆಗಳಿಗೆ ತರಬೇತಿಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಸತ್ತಿನ ಕಲಾಪಗಳನ್ನು ನುಂಗಿದ ರೀಟಾ ಬಂಧನ
ಮಾಯಾ ಸರ್ಕಾರ ವಜಾಕ್ಕೆ ಬಿಜೆಪಿ, ಎಸ್ಪಿ ಒತ್ತಾಯ
ಸೋನಿಯಾಗಾಂಧಿ ಕ್ಷಮೆಯಾಚಿಸಲಿ: ಮಾಯಾವತಿ
ಮಾಯಾಮಾಯೆ: ಯುಪಿಸಿಸಿ ಅಧ್ಯಕ್ಷೆ ರೀಟಾ ಬಂಧನ
ರಾಹುಲ್ ದನಿಎತ್ತಲಿ
ಲೋಕಸಭೆಯಲ್ಲಿ ಹಿಂದಿ-ಇಂಗ್ಲೀಷ್ ಜುಗಲ್ಬಂದಿ