ಫೋರ್ಜರಿ ಹಾಗೂ ಪಾಸ್‌ಪೋರ್ಟ್‌ಗಳ ದುರ್ಬಳಕೆಯನ್ನು ತಪ್ಪಿಸುವ ಸಲುವಾಗಿ ಚಿಪ್‌ನಲ್ಲಿ ಬಯೋಮೆಟ್ರಿಕ್ ಮಾಹಿತಿಗಳನ್ನು ಹೊಂದಿರುವ ಇ-ಪಾಸ್‌ಪೋರ್ಟನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳಿದೆ.
ರಾಜತಾಂತ್ರಿಕರು ಮತ್ತು ಅಧಿಕಾರಿಗಳಿಗೆ ಇ-ಪಾಸ್‌ಪೋರ್ಟ್‌ಗಳನ್ನು ನೀಡುವ ಪೈಲಟ್ ಯೋಜನೆಯನ್ನು ಈಗಾಗಲೇ ಆರಂಭಗೊಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯಸಚಿವ ಶಶಿ ಥರೂರ್ ಹೇಳಿದ್ದಾರೆ.
"ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು, ಅಧಿಕೃತ ಮತ್ತು ರಾಜತಾಂತ್ರಿಕ ವರ್ಗದಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸುವ ಪೈಲಟ್ ಯೋಜನೆಯು ಕಳೆದ ವರ್ಷ ಜೂನ್ 25ರಂದು ಆರಂಭಗೊಂಡಿದೆ" ಎಂದು ಅವರು ನುಡಿದರು.
ಪ್ರಸಕ್ತ ಪಾಸ್‌ಪೋರ್ಟ್‌ಗಳಲ್ಲಿ ಮುಖದ ಚಿತ್ರಮಾತ್ರ ಇರುತ್ತದೆ. ಆದರೆ ಇ-ಪಾಸ್‌ಪೋರ್ಟಿನಲ್ಲಿ ವ್ಯಕ್ತಿಯ ಬೆರಳಚ್ಚು ಸೇರಿದಂತೆ ಸಂಪೂರ್ಣ ವೈಯಕ್ತಿಕ ವಿವರಗಳು ಇರುತ್ತವೆ ಎಂದು ಅವರು ನುಡಿದರು.
ಇ-ಪಾಸ್‌ಪೋರ್ಟ್ ಅನ್ನು ಅಭಿವೃದ್ಧಿ ಪಡಿಸಿರುವ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ) ಮತ್ತು ಐಐಟಿ(ಕಾನ್ಪುರ)ಗಳಿಗೆ ಇ-ಪಾಸ್‌ಪೋರ್ಟ್ ಯೋಜನೆಗಾಗಿ ಕೆಲಸಮಾಡುವಂತೆ ಹೇಳಿದೆ. |