ಉಗ್ರವಾದಿ ದಾಳಿಗಳಿಂದ ತತ್ತರಿಸಿರುವ, ಇನ್ನೊಂದು ದಾಳಿಯ ಸಾಧ್ಯತೆ ಕುರಿತು ಗುಪ್ತಚರ ಮಾಹಿತಿಗಳು ಹರಿದಾಡುತ್ತಿರುವಂತೆ, ಗುರುವಾರ ನವಿ ಮುಂಬೈನ ಮಾಲ್ ಒಂದರಲ್ಲಿ ಬಾಂಬ್ ಇರಿಸಲಾಗಿದೆ ಎಂಬುದಾಗಿ ಗುರುವಾರ ಹುಸಿ ಬೆದರಿಕಾ ಕರೆ ನೀಡಿರುವ ಕುರಿತು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ನವಿಮುಂಬೈನ ವಾಶಿಯಲ್ಲಿರುವ ರಘುಲೀಲಾ ಮಾಲ್‌ನಲ್ಲಿ ಬಾಂಬ್ ಶೋಧಕಾರ್ಯ ನಡೆಸಲಾಗಿದೆ.
ಮಾಲ್‌ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮುಂಜಾನೆ ಸುಮಾರು ಹನ್ನೊಂದೂವರೆ ಹೊತ್ತಿಗೆ ಕರೆ ಸ್ವೀಕರಿಸಿದ್ದರು. ಮಾಲ್‌ನಲ್ಲಿ ಸ್ಫೋಟಕ ವಸ್ತುವನ್ನು ಇರಿಸಲಾಗಿದೆ ಎಂದು ಹೇಳಲಾಗಿತ್ತು.
ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್)ವು ಸ್ಥಳವನ್ನು ತಲುಪಿ ಹುಡುಕಾಟ ನಡೆಸಿದ್ದರೂ ಏನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. |