ನವದೆಹಲಿ: ರಾಜ್ಯಸಭೆಯಲ್ಲಿ ಖಾಲಿ ಬಿದ್ದಿರುವ 13 ಸ್ಥಾನಗಳಿಗೆ ಆಗಸ್ಟ್ 10ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ಹೇಳಿದೆ.
ಮಹಾರಾಷ್ಟ್ರದ ಮೂರು, ಮಧ್ಯಪ್ರದೇಶದ ಎರಡು ಹಾಗೂ ಬಿಹಾರ, ಚತ್ತೀಸ್‌ಗಢ, ಒರಿಸ್ಸಾ, ರಾಜಸ್ಥಾನ್, ದೆಹಲಿ, ಜಮ್ಮುಕಾಶ್ಮೀರ, ಹರ್ಯಾಣ ಮತ್ತು ಉತ್ತರಪ್ರದೇಶಗಳ ತಲಾ ಒಂದೊಂದು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಗೆ ರಾಜ್ಯಸಭಾ ಸದಸ್ಯರು ಸ್ಫರ್ಧಿಸಿದ ಕಾರಣ 13 ಸ್ಥಾನಗಳು ಖಾಲಿಬಿದ್ದಿವೆ.
ಜುಲೈ 23ರಂದು ಅಧಿಸೂಚನೆ ಹೊರಡಿಸಲಾಗುವುದು ಮತ್ತು ನಾಮಪತ್ರಗಳನ್ನು ಸಲ್ಲಿಸಲು ಜುಲೈ 30 ಕೊನೆಯ ದಿನಾಂಕ. ಜುಲೈ 31ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ನಾಮಪತ್ರಗಳ ಹಿಂತೆಗೆತಕ್ಕೆ ಆಗಸ್ಟ್ 3 ಕೊನೆಯ ದಿನ. ಆಗಸ್ಟ್ 10 ರಂದೇ ಮತ ಎಣಿಕೆ ನಡೆಯುತ್ತದೆ. |