ಹೈದರಾಬಾದ್: ಅವಶ್ಯಕವಸ್ತುಗಳ ಬೆಲೆ ಏರಿಕೆಯನ್ನು ತಡೆಯುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಪ್ರತಿಭಟಿಸಿ ಪ್ರಜಾರಾಜ್ಯಂ ಪಕ್ಷದ ಸ್ಥಾಪಕಾಧ್ಯಕ್ಷ ಚಿರಂಜೀವಿ ಅವರು ಇಲ್ಲಿನ ಮುಖ್ಯ ಪಡಿತರ ಅಧಿಕಾರಿ ಕಚೇರಿ ವಿರುದ್ಧ ಧರಣಿ ನಡೆಸಿದಾಗ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಜೀವನ ದುರ್ಭರವಾಗಿದೆ. ಎಲ್ಲಾ ವಸ್ತುಗಳ ಬೆಲೆ ಶೇ.100 ರಷ್ಟು ಹೆಚ್ಚಾಗಿದೆ. ಈಗಿನ ಬೆಲೆಗಳಲ್ಲಿ ವಸ್ತುಗಳ ಖರೀದಿ ಜನಸಾಮಾನ್ಯರಿಗೆ ಅಸಾಧ್ಯ ಎಂದು ಚಿರಂಜೀವಿ ಹೇಳಿದರು. |