ರಾಷ್ಟ್ರಾದ್ಯಂತ ಸಂಚಲನೆ ಮೂಡಿಸಿದ್ದ ಗುಜರಾತ್ ಕಳ್ಳಭಟ್ಟಿ ದುರಂತದ ಪ್ರಮುಖ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.
ಸುಮಾರು 130ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿರುವ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿನೋದ್ ಚೌವಾಣ್ ಅಲಿಯಾಸ್ ಡಾಗ್ರಿ ಎಂಬಾತ ಹಾಗೂ ಆತನ ಒಬ್ಬ ಸಹಚರನನ್ನು ಬಂಧಿಸಲಾಗಿದೆ. ಈ ಇಬ್ಬರನ್ನು ವಡೋದರದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೇಡಾ ಜಿಲ್ಲೆಯ ಮಹೆಮದಾಬಾದ್ ತಾಲೂಕಿನ ತನ್ನ ಗ್ರಾಮದಲ್ಲಿ ವಿನೋದ್ ಈ ವಿಷಕಾರಿ ಸಾರಾಯಿಯನ್ನು ತಯಾರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈತ 1100 ಲೀಟರ್ ಸಾರಾಯಿಯನ್ನು ಜುಲೈ ಮೊದಲ ವಾರದಲ್ಲಿ ಪೂರೈಸಿದ್ದ ಎಂದು ಪೊಲೀಸರು ಹೇಳಿದ್ದಾರೆ. |