ಉತ್ತರ ಪ್ರದೇಶದ ಮಾಯವತಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಎಐಸಿಸಿ ಕಾರ್ಯದರ್ಶಿ ಹಾಗೂ ಅಮೇಠಿ ಸಂಸದ ರಾಹುಲ್ ಗಾಂಧಿ, ಈ ರಾಜ್ಯದಲ್ಲಿ ಪ್ರತಿಮೆಗಳು ಮತ್ತು ಆನೆಗಳಿಗೆ ಮಾತ್ರ ಅವಕಾಶವಿದೆ ಅಲ್ಲಿ ಅಭಿವೃದ್ಧಿಗೆ ಅವಕಾಶವಿಲ್ಲ ಎಂದು ಹೇಳುತ್ತಾ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.ತನ್ನ ಕ್ಷೇತ್ರಕ್ಕೆ ವಂದನೆ ಸಲ್ಲಿಸಲು ರಾಹಲ್ ಅಮೇಠಿಗೆ ಭೇಟಿ ಗುರುವಾರ ನೀಡಿದ್ದಾರೆ. ಚುನಾವಣಾ ಗೆಲುವಿನ ಬಳಿಕ ರಾಹುಲ್ ಇದೇ ಮೊದಲಬಾರಿಗೆ ತನ್ನ ಕ್ಷೇತ್ರಕ್ಕೆ ತೆರಳಿದ್ದು, ಈ ವೇಳೆ ಯುಪಿಸಿಸಿ ಅಧ್ಯಕ್ಷೆ ರೀಟಾ ಬಹುಗುಣ ಜೋಷಿ ಅವರು ಮಾಯಾವತಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು." ಪ್ರತಿಮೆಗಳು ಮತ್ತು ಆನೆ(ಬಿಎಸ್ಪಿ ಚಿಹ್ನೆ)ಗಳಿಗೆ ಇಲ್ಲಿ ಜಾಗವಿದೆ, ಆದರೆ ಅಭಿವೃದ್ಧಿ ಮತ್ತು ವಿದ್ಯುತ್‌ಗೆ ಇಲ್ಲಿ ಅವಕಾಶವಿಲ್ಲ" ಎಂದು ರಾಹುಲ್ ವ್ಯಂಗ್ಯವಾಡಿಗರು. ಸಾರ್ವಜನಿಕ ಹಣವನ್ನು ವಿನಿಯೋಗಿಸಿ ದೊಡ್ಡ ಮೊತ್ತ ಬಳಸಿ ಕಾನ್ಶೀರಾಮ್ ಹಾಗೂ ಮಾಯಾವತಿ ಅವರ ಪ್ರತಿಮೆಯನ್ನು ಉತ್ತರಪ್ರದೇಶದಾದ್ಯಂತ ಸ್ಥಾಪಿಸಿರುವ ವಿವಾದದ ಕುರಿತು ಅವರು ಮಾತನಾಡುತ್ತಿದ್ದರು.ತನ್ನ ಕ್ಷೇತ್ರದಲ್ಲಿ ವಿದ್ಯುತ್ ಕೊರತೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಪೊಲೀಸರು ಕ್ರಮಕೈಗೊಂಡಿರುವ ಹಿನ್ನೆಲೆಯಲ್ಲಿ "ನಿಮಗೆ ವಿದ್ಯುತ್ ಬೇಕಿದ್ದರೆ, ಲಕ್ನೋದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಮೂರು ವರ್ಷಗಳಲ್ಲಿ ನೀವು ಲಕ್ನೋದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರೂಪಿಸಬೇಕು. ಹಾಗಾದಾಗ ನಾನು ವಿದ್ಯುತ್ ಸಮಸ್ಯೆಗಳಿಗೆ ಉತ್ತರಿಸಬಲ್ಲೆ" ಎಂದು ನುಡಿದರು. |