ಭಯೋತ್ಪಾದನೆಯನ್ನು ಹೊರಗಿರಿಸಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಒಲವು ವ್ಯಕ್ತಪಡಿಸುವ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರೊಂದಿಗೆ ನೀಡಿರುವ ಹೇಳಿಕೆಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರವ ಬಿಜೆಪಿ, ಇದನ್ನು ಪ್ರತಿಭಟಿಸಿ ಲೋಕಸಭೆಯಲ್ಲಿ ಸಭಾತ್ಯಾಗ ನಡೆಸಿತು.
ಪಾಕಿಸ್ತಾನದೊಂದಿಗಿನ ಸಮಗ್ರ ಮಾತುಕತೆಯಿಂದ ಉಗ್ರವಾದದ ವಿರುದ್ದ ಕ್ರಮವನ್ನು ಹೊರಗಿರಿಸಲು ಭಾರತ ಒಪ್ಪಿಗೆ ನೀಡಿರುವುದನ್ನು ಭಾರತ ಬಲವಾಗಿ ವಿರೋಧಿಸಿದೆ.
ಇದು, ಪಾಕಿಸ್ತಾನದ ನೆಲದಿಂದ ಉಗ್ರವಾದವು ಎಲ್ಲಿಯ ತನಕ ನಿಲ್ಲುವುದಿಲ್ಲವೋ ಅಲ್ಲಿಯ ತನಕ ಮಾತುಕತೆ ಇಲ್ಲ ಎಂಬ ಭಾರತದ ಸುದೀರ್ಘಕಾಲದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿರುವ ಬಿಜೆಪಿ, ಪ್ರಧಾನಿ ಈ ರೀತಿಯ ಹೇಳಿಕೆ ನೀಡಲು ಪ್ರಚೋದನೆ ಏನು ಎಂಬುದನ್ನು ಪ್ರಶ್ನಿಸಿದೆ.
ಇದು ಗಂಭೀರ ವಿಚಾರವೆಂದು ವಿಪಕ್ಷಗಳ ಉಪನಾಯಕಿ ಸುಶ್ಮಾ ಸ್ವರಾಜ್ ಲೋಕಸಭೆಯಲ್ಲಿ ಈ ವಿಚಾರವನ್ನು ಎತ್ತಿದರು. |