ವಿದಿಶಾ ಸಂಸತ್ ಕ್ಷೇತ್ರದಿಂದ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ವಯ ಬಿಜೆಪಿ ಸಂಸದೆ ಸುಷ್ಮಾ ಸ್ವರಾಜ್ ಅವರಿಗೆ ಮಧ್ಯಪ್ರದೇಶ ಹೈಕೋರ್ಟ್ ನೋಟೀಸು ನೀಡಿದೆ. ನ್ಯಾಯಮೂರ್ತಿ ಕೆ.ಕೆ. ಲಹೋಟಿ ಅವರು ಈ ನೋಟೀಸು ನೀಡಿದ್ದು ಆರು ವಾರಗಳೊಳಗಾಗಿ ಉತ್ತರಿಸಲು ಸೂಚಿಸಿದೆ.
ತಾನು ನಿಗದಿತ ಸಮಯದೊಳಗಾಗಿ ನಾಮಪತ್ರದೊಂದಿಗೆ ಎ ಫಾರಂ ಸಲ್ಲಿಸಿದ್ದರೂ, ಸುಷ್ಮಾಗೆ ಸಹಾಯ ಮಾಡಲು ತನ್ನ ಅಭ್ಯರ್ಥಿತನವನ್ನು ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಪಟೇಲ್ ವಾದಿಸಿದ್ದಾರೆ.
ತಾನು ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ನಿಗದಿತ ಸಮಯದೊಳಗಾಗಿ ಎ ಫಾರಂನ ಜೆರಾಕ್ಸ್ ಪ್ರತಿ ಹಾಗೂ ಬಿ ಫಾರಂನ ಮೂಲ ಪ್ರತಿಯೊಂದಿಗೆ ತಲುಪಿದ್ದೆ ಎಂದು ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಪಟೇಲ್ ಅವರ ಅಭ್ಯರ್ಥಿತನ ನಿರಾಕರಣೆಯಿಂದಾಗಿ ಸುಷ್ಮಾ ಸ್ವರಾದ್ ಸುಲಭ ಜಯಗಳಿಸಿದ್ದರು. ಈ ಕಾರಣಕ್ಕಾಗಿ ಪಟೇಲ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಇತ್ತೀಚೆಗೆ ಉಚ್ಚಾಟನೆಗೊಳಿಸಿದೆ. |