ಹಳ್ಳಿಯೊಂದರ ಶಾಲೆಯ ಅಡುಗೆ ಮನೆಗೆ ನುಗ್ಗಿದ ಆನೆಗಳ ಗುಂಪೊಂದು, ಮಕ್ಕಳಿಗಾಗಿ ಸಿದ್ಧಪಡಿಸಿಟ್ಟಿದ್ದ ಮಧ್ಯಾಹ್ನದೂಟವನ್ನು ಉಂಡು ತೇಗಿದ ಘಟನೆ ಜಾರ್ಖಂಡ್‌ನಿಂದ ವರದಿಯಾಗಿದೆ.
ಜಾರ್ಖಂಡ್‌ನ ಸಾರೈಕೆಲಾ-ಕರ್ಸ್ವಾನ್ ಜಿಲ್ಲೆಯಿಂದ 35 ಕಿಲೋಮೀಟರ್ ದೂರವಿರುವ ಮಕ್ದಾಂದಿ ರಾಜಕೀಯ್ ಮಧ್ಯ ವಿದ್ಯಾಲಯಕ್ಕೆ ಆನೆಗಳು ಶುಕ್ರವಾರ ನುಗ್ಗಿ, ಮಧ್ನಾಹ್ನದ ಊಟವನ್ನು ತಿಂದಿವೆ ಎಂದು ಶಾಲೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅವರು ಶಾಲೆಗೆ ಬಂದಾಗ ಶಾಲೆಯ ಬಾಗಿಲು ಮತ್ತು ಕಿಟಕಿಗಳು ಮುರಿದುಕೊಂಡಿತ್ತು ಮತ್ತು ಅಡುಗೆ ಕೋಣೆ ಚಲ್ಲಾಪಿಲ್ಲಿಗೊಂಡಿತ್ತು ಎಂದು ಹೇಳಿದರು. ಇದರಿಂದಾಗಿ ಶುಕ್ರವಾರ ಶಾಲೆಗೆ ರಜೆ ಘೋಷಿಸಬೇಕಾಯಿತು. |