ವೆಂಬನಾಡು ದ್ವೀಪವನ್ನು ಬೇರ್ಪಡಿಸುವ ದೇಶದಲ್ಲಿಯೇ ಅತೀ ಉದ್ದದ ರೈಲ್ವೇ ಸೇತುವೆ ಬರುವ ನವೆಂಬರ್‌ನಲ್ಲಿ ಕೊಚ್ಚಿಯಲ್ಲಿ ಉದ್ಘಾಟನೆಗೊಂಡು ಅಲ್ಲಿನ ಜನರಿಗೆ ತಮ್ಮ ನಗರದ ಹೆಮ್ಮೆ ಹೆಚ್ಚಿಸಲಿದೆ.
4.62 ಕಿ. ಮೀ. ಉದ್ದದ ವಲ್ಲರಪಾದಮ್ ಸೇತುವೆಯು ಬಿಹಾರದ ದೇಹ್ರಿ ಬಳಿಯ ಸೋನೆ ನದಿಗೆ ಕಟ್ಟಲಾಗಿದ್ದ ನೆಹರು ಸೇತುವೆಗಿಂತ ಒಂದು ಕಿ.ಮೀ. ಹೆಚ್ಚು ಉದ್ದವಿದ್ದು, ಅತಿ ಉದ್ದದ ರೈಲ್ವೇ ಸೇತುವೆ ಎಂಬ ಹೆಗ್ಗಳಿಕೆಗೆ ಕಾರಣವಾಗಲಿದೆ.
ಅತೀ ಕಡಿಮೆ ಸಮಯದಲ್ಲಿ, ಅಂದರೆ 18 ತಿಂಗಳುಗಳಲ್ಲಿ ನಿರ್ಮಾಣಗೊಂಡ ಅತೀ ಉದ್ದದ ಸೇತುವೆ ಇದಾಗಿದೆ ಎಂದು ಸೇತುವೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ರೈಲು ವಿಕಾಸ ನಿಗಮ (ಆರ್‌ವಿಎನ್ಎಲ್)ದ ಉಪ ಪ್ರಧಾನ ವ್ಯವಸ್ಥಾಪಕ ಜೆ. ಕೇಶವ ಚಂದ್ರನ್ ತಿಳಿಸಿದ್ದಾರೆ.
ದಟ್ಟ ಜನವಸತಿ ಪ್ರದೇಶವಾದ ವದುತಲಾ ಸುತ್ತಮುತ್ತ ಭೂ ಸ್ವಾಧೀನವನ್ನು ತಪ್ಪಿಸುವ ಉದ್ದೇಶದೊಂದಿಗೆ ಕೇಂದ್ರ ಸರಕಾರದ ಸಂಪೂರ್ಣ ನಿಧಿಯಿಂದ ಈ ಬೃಹತ್ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ.
ಈ ಸೇತುವೆಯು ವಲ್ಲಾರಪದಾಮ್ ಅಂತಾರಾಷ್ಟ್ರೀಯ ಸರಕು ಸಾಗಣೆ ಟರ್ಮಿನಲ್ (ಐಸಿಟಿಟಿ) ರೈಲ್ವೇ ಸಂಪರ್ಕಕ್ಕೆ ನಿರ್ಮಿಸಿದ 9 ಕಿಮೀ ಉದ್ದದ ರೈಲ್ವೇ ಸೇತುವೆಯ ಒಂದು ಭಾಗವಾಗಿದೆ. |