ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ, ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿ ಬಂಧಿತರಾಗಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ ಜೋಶಿ ಅವರಿಗೆ ಶನಿವಾರ ಸ್ಥಳೀಯ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.
30 ಸಾವಿರ ರೂ.ಗಳ ಭದ್ರತಾ ಠೇವಣಿ ಇರಿಸಿದ ಬಳಿಕ ರೀಟಾ ಅವರು ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ. ಜು.16ರಂದು ಬಂಧಿತರಾಗಿದ್ದ ಅವರಿಗೆ ಎರಡು ವಾರಗಳ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿತ್ತು. ಈ ಮಧ್ಯಂತರ ಜಾಮೀನು ಜುಲೈ 29ರವರೆಗೆ ಜಾರಿಯಲ್ಲಿರುತ್ತದೆ.
ರೀಟಾ ಮೇಲೆ ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ಪಕ್ಷವು ಅಲಹಾಬಾದ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಜುಲೈ 21ರಂದು ವಿಚಾರಣೆ ನಡೆಯಲಿದೆ. |