ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜ್ಯಸಭೆಯತ್ತ ದೃಷ್ಟಿ ನೆಟ್ಟ ದೇಶ್‌ಮುಖ್, ಆದಿಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಸಭೆಯತ್ತ ದೃಷ್ಟಿ ನೆಟ್ಟ ದೇಶ್‌ಮುಖ್, ಆದಿಕ್
ಕೇಂದ್ರ ಭಾರಿ ಕೈಗಾರಿಕಾ ಸಚಿವ ವಿಲಾಸ್ ರಾವ್ ದೇಶ್‌ಮುಖ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ನಾಯಕ ಗೋವಿಂದ್‌ರಾವ್ ಅಧಿಕ್ ಅವರು ಮಹಾರಾಷ್ಟ್ರದಿಂದ ರಾಜ್ಯ ಸಭೆ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ.

ಮೂಲಗಳ ಪ್ರಕಾರ, ಮೇಲ್ಮನೆಯಲ್ಲಿರುವ ಎರಡು ಸೀಟುಗಳಿಗೆ ವಿಲಾಸ್‌ರಾವ್ ದೇಶ್‌ಮುಖ್ ಮತ್ತು ಗೋವಿಂದ್‌ರಾವ್ ಅಧಿಕ್ ಕಾಂಗ್ರೆಸ್ ಮತ್ತು ಎನ್‌ಸಿಪಿಯಿಂದ ಅಭ್ಯರ್ಥಿಗಳಾಗಲಿದ್ದಾರೆ.

ಉಳಿದ ಮೂರನೇ ಸ್ಥಾನಕ್ಕಾಗಿ ಕಳೆದ ಮಹಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಆರ್‌ಪಿಐ ಅಧ್ಯಕ್ಷ ರಾಮ್‌ದಾಸ್ ಅಠವಳೆ ಪ್ರಯತ್ನಿಸಲಿದ್ದು, ಕಾಂಗ್ರೆಸ್ ಮತ್ತು ಎನ್‌ಸಿಪಿ ಮೇಲೆ ಒತ್ತಡ ಹೇರಲಿದ್ದಾರೆ. ಇನ್ನೊಂದೆಡೆ ಪ್ರತಿಪಕ್ಷಗಳಾದ ಬಿಜೆಪಿ-ಶಿವಸೇನೆ ಮಿತ್ರಕೂಟವು ಕೂಡ, ಕನಿಷ್ಠ ಒಬ್ಬರನ್ನಾದರೂ ರಾಜ್ಯ ಸಭೆಗೆ ಕಳುಹಿಸುವ ಪ್ರಯತ್ನ ಮಾಡುತ್ತಿದೆ.

ವಿಲಾಸ್‌ರಾವ್ ದೇಶ್‌ಮುಖ್ ಮುಂಬೈ ದಾಳಿ ಪ್ರಕರಣದ ಬಳಿಕ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು ಮತ್ತು ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದರು.

ಲೋಕಸಭೆ ಚುನಾವಣೆಯ ಕೆಲವು ಸಮಯದ ಹಿಂದಷ್ಟೇ ಎನ್‌ಸಿಪಿ ಸೇರಿದ್ದ ಗೋವಿಂದ್‌ರಾವ್ ಅಧಿಕ್, 1992-1998ರ ಅವಧಿಯಲ್ಲಿ ರಾಜ್ಯ ಸಭೆಯಲ್ಲಿ ಇದ್ದರು. ಅವರು 2000-2009 ಅವಧಿಯಲ್ಲಿ ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯರಾಗಿದ್ದರು. ಎನ್‌ಸಿಪಿ ನೇತಾರ ಶರದ್ ಪವಾರ್‌ರ ಪ್ರಧಾನ ಮಂತ್ರಿಯ ಅಭ್ಯರ್ಥಿ ಪದವಿಯನ್ನು ಬೆಂಬಲಿಸಿ ಅವರು ಚುನಾವಣೆಗೆ ಮೊದಲು, ಇನ್ನೂ 3 ವರ್ಷ ಬಾಕಿ ಇರುವಾಗಲೇ ಪರಿಷತ್‌ಗೆ ರಾಜೀನಾಮೆ ನೀಡಿದ್ದರು. ಅಧಿಕ್ ತೆರವುಗೊಳಿಸಿದ್ದ ಸ್ಥಾನಕ್ಕೆ ಮಹಾರಾಷ್ಟ್ರ ಪಿಸಿಸಿ ಅಧ್ಯಕ್ಷ ಅಧ್ಯಕ್ಷ ಮಾಣಿಕ್ ರಾವ್ ಠಾಕ್ರೆಯವರನ್ನು ಆರಿಸಲಾಗಿತ್ತು.

10 ರಾಜ್ಯಗಳಲ್ಲಿ ಖಾಲಿ ಬಿದ್ದಿರುವ 13 ರಾಜ್ಯಸಭಾ ಸ್ಥಾನಗಳಿಗೆ ಅಗಸ್ಟ್ 10 ರಂದು ಚುನಾವಣೆ ನಡೆಯುತ್ತದೆ ಎಂದು ಆಯೋಗವು ಈಗಾಗಲೇ ಘೋಷಿಸಿದೆ. ಮಹಾರಾಷ್ಟ್ರದಲ್ಲಿ 3 ಸೀಟು, ಮಧ್ಯಪ್ರದೇಶದಲ್ಲಿ ಎರಡು ಮತ್ತು ಬಿಹಾರ, ಛತ್ತೀಸ್‌ಗಢ, ಒರಿಸ್ಸಾ, ರಾಜಸ್ಥಾನ, ದೆಹಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ಒಂದು ಸೀಟುಗಳಿಗೆ ಚುನಾವಣೆ ನಡೆಯಲಿವೆ.

ಸುಪ್ರಿಯಾ ಸುಲೆ ಮತ್ತು ಪ್ರಫುಲ್ ಪಟೇಲ್ (ಎನ್‌ಸಿಪಿ) ಮತ್ತು ಸುಶೀಲ್ ಕುಮಾರ್ ಶಿಂಧೆ (ಕಾಂಗ್ರೆಸ್) ಅವರು ಇತ್ತೀಚೆಗೆ ಲೋಕಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರ ರಾಜ್ಯಸಭಾ ಸ್ಥಾನಗಳು ತೆರವಾಗಿದ್ದವು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೀಟಾ ಬಹುಗುಣ ಜೋಶಿಗೆ ಮಧ್ಯಂತರ ಜಾಮೀನು
ರೀಟಾ ಮನೆಗೆ ಬೆಂಕಿ: ಬಿಸ್ಪಿ ಶಾಸಕ ವಿರುದ್ದ ಎಫ್ಐಆರ್
ಕೊಚ್ಚಿಯಲ್ಲಿ ದೇಶದ ಅತೀ ಉದ್ದದ ರೈಲ್ವೇ ಸೇತುವೆ
ಭಾರತ-ಪಾಕ್ ಮಾತುಕತೆಗೆ ಒತ್ತಡ ಇಲ್ಲ: ಹಿಲರಿ
ಶಾಲೆಯಲ್ಲಿ ಆನೆಗಳಿಗೆ ಮಧ್ಯಾಹ್ನದೂಟ!
ಅಸಮಾಧಾನ: ಸಿದ್ದು ಸರದಿ, ರಾಜೀನಾಮೆ ಸಲ್ಲಿಕೆ