ಉತ್ತರಾಖಂಡ ರಾಜ್ಯಪಾಲ ಬಿ.ಎಲ್.ಜೋಶಿ ಅವರನ್ನು ಉತ್ತರಪ್ರದೇಶ ರಾಜ್ಯಪಾಲರನ್ನಾಗಿ ಶನಿವಾರ ವರ್ಗಾಯಿಸಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಕೇಂದ್ರ ಮಾಜಿ ಸಚಿವೆ, ಕನ್ನಡತಿ ಮಾರ್ಗರೆಟ್ ಆಳ್ವ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.ಆ ರಾಜ್ಯದ ಪ್ರಥಮ ಮಹಿಳಾ ರಾಜ್ಯಪಾಲರು ಎಂಬ ಹೆಗ್ಗಳಿಕೆ ಆಳ್ವ ಅವರ ಪಾಲಾಗಿದೆ. ರಾಜೀವ್ ಗಾಂಧಿ ಹಾಗೂ ಪಿ.ವಿ.ನರಸಿಂಹ್ ರಾವ್ ಸರ್ಕಾರದಲ್ಲಿ ಸಚಿವರಾಗಿ ದುಡಿದ ಅನುಭವ ಮಾರ್ಗರೆಟ್ ಆಳ್ವ ಅವರಿಗಿದೆ. ಇದಲ್ಲದೆ, ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ ಅವರನ್ನು ಹರ್ಯಾಣ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಬಿ.ಎಲ್.ಜೋಶಿ ಅವರನ್ನು ಉತ್ತರಾಖಂಡದಿಂದ ಉತ್ತರ ಪ್ರದೇಶಕ್ಕೆ ವರ್ಗಾಯಿಸಲಾಗಿದೆ.ಜಾರ್ಖಂಡ್ ರಾಜ್ಯಪಾಲ ಸೈಯದ್ ಸಿಬ್ತೆ ರಜಿ ಅವರನ್ನು ಅಸ್ಸಾಂಗೆ, ನಾಗಾಲ್ಯಾಂಡ್‌ನಲ್ಲಿದ್ದ ಕೆ.ಶಂಕರನಾರಾಯಣ ಅವರನ್ನು ರಾಂಚಿಗೆ ಕಳುಹಿಸಲಾಗಿದೆ. ಕಾಂಗ್ರೆಸ್ ನಾಯಕ ಇಕ್ಬಾಲ್ ಸಿಂಗ್ ಅವರನ್ನು ಪುದುಚೇರಿಯ ಲೆ.ಗವರ್ನರ್ ಆಗಿ ನೇಮಿಸಲಾಗಿದೆ. |