ಕುಖ್ಯಾತ ಬಿಎಂಡಬ್ಲ್ಯು ಅಪಘಾತ ಪ್ರಕರಣದ ಕುರಿತು ಸೋಮವಾರ ದೆಹಲಿಯ ಹೈಕೋರ್ಟ್ ತೀರ್ಪು ನೀಡಲಿದೆ. ನೌಕಾ ಪಡೆಯ ಮುಖ್ಯಸ್ಥರಾಗಿದ್ದ ಎಸ್.ಎಂ.ನಂದಾ ಅವರ ಪುತ್ರ ಸಂಜೀವ್ ನಂದಾ 1999ರಲ್ಲಿ ತನ್ನ ಬಿಎಂಡಬ್ಲ್ಯು ಕಾರನ್ನು ಫುಟ್‌ಪಾತ್‌ನಲ್ಲಿ ಮಲಗಿದ್ದ ಆರು ಮಂದಿಯ ಮೇಲೆ ಕಾರು ಚಲಾಯಿಸಿ ಕೊಂದ ಪ್ರಕರಣ ಇದಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಸಂಜೀವ್ ನಂದಾಗೆ ಈಗಾಗಲೇ ಐದು ವರ್ಷಗಳ ಕಠಿಣ ಜೈಲುಶಿಕ್ಷೆ ವಾಸ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಹೂಡಿದ್ದರು.
ಪ್ರಕರಣದಲ್ಲಿ ರಾಜೀವ್ ಗುಪ್ತಾ ಮತ್ತು ಬೋಲಾನಾಥ್ ಕೂಡ ಆರೋಪಿಗಳಾಗಿದ್ದಾರೆ. ಇವರಿಬ್ಬರಿಗೂ ಕೆಳ ನ್ಯಾಯಾಲಯ ಒಂದೂವರೆ ವರ್ಷಗಳ ಕಾಲದ ಕಾರಗೃಹ ಶಿಕ್ಷೆ ವಿಧಿಸಿದ್ದು, ನಂದಾ ಜೊತೆಗೆ ಈ ಇಬ್ಬರೂ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದಾರೆ. |