ಮುಂದಿನ 12-18 ತಿಂಗಳಲ್ಲಿ ಪ್ರಥಮ ಕಂತಿನ ಏಕರೂಪದ ಗುರುತಿನ ಚೀಟಿಯನ್ನು ನಾಗರಿಕರಿಗೆ ವಿತರಿಸಲಾಗುವುದು ಎಂದು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಗುರುತಿನಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಭರವಸೆ ನೀಡಿದ್ದಾರೆ.
ಗುರುವಾರ ವಿಧ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದ ನಂದನ್ ನಿಲೇಕಣಿ ನವದೆಹಲಿಯ ಯೋಜನಾ ಭವನದಲ್ಲಿರುವ ತಮ್ಮ ನೂತನ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಈ ಗುರುತು ಚೀಟಿ ನಾಗರಿಕರ ಪೌರತ್ವವವನ್ನು ಸೂಚಿಸುತ್ತದೆ. ಜತೆಗೆ, ಇದರ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಪಡೆಯಬಹುದು ಎಂದು ವಿವರಿಸಿದರು.
ಅಲ್ಲದೇ ಭಾರತ ಸರ್ಕಾರ ಆರಂಭಿಸಿರುವ ರಾಷ್ಟ್ರೀಯ ಗುರುತು ಚೀಟಿ ಯೋಜನೆ ಬಗ್ಗೆ ಅಮೆರಿಕ ಕೂಡ ಆಸಕ್ತಿ ತೋರಿಸಿದೆ, ಇದೇ ಮಾದರಿಯ ಯೋಜನೆ ತಮ್ಮ ದೇಶದಲ್ಲೂ ಜಾರಿಗೆ ಬರಬೇಕು ಎಂದು ಅಮೆರಿಕದ ಸಂಸದರು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದರು. |