ತನ್ನ ಹಾಗೂ ಪತ್ನಿಯ ಮರಣಾನಂತರ ತನ್ನ ಗೊಪಾಲಪುರಂನಲ್ಲಿರುವ ನಿವಾಸ ದತ್ತಿ ಆಸ್ಪತ್ರೆಯಾಗಿ ಪರಿವರ್ತನೆಯಾಗಲಿದೆ ಎಂದು ತಮಿಳ್ನಾಡು ಮುಖ್ಯಮಂತ್ರಿ ಕುಣಾನಿಧಿ ಹೇಳಿದ್ದಾರೆ.ಕಲೈಗ್ನಾರ್ ವಿಮಾ ಯೋಜನಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ತನ್ನ ನಿವಾಸದ ಮೌಲ್ಯವು ಪ್ರಸಕ್ತ ಮಾರುಕಟ್ಟೆ ದರದ ಪ್ರಕಾರ ಎಂಟು ಕೋಟಿ ರೂಪಾಯಿ ಎಂದು ತಿಳಿಸಿದರು. ಕಲೈಗ್ನಾರ್ ವಿಮಾ ಯೋಜನೆಯು ಜೀವ ಉಳಿಸುವ ಚಿಕಿತ್ಸಾ ಯೋಜನೆಯಾಗಿದೆ.ಆಸ್ಪತ್ರೆಯು ತನ್ನ ಹೆತ್ತವರಾದ ಅಂಜುಗಂ ಮತ್ತು ಮುತ್ತುವೇಲು ಅವರ ಹೆಸರಿನಲ್ಲಿ ಇರಲಿದೆ . ಇದಕ್ಕಾಗಿ ನಾನು ನನ್ನ ಪುತ್ರರು ಹಾಗೂ ಪತ್ನಿಯ ಒಪ್ಪಿಗೆ ಪಡೆದಿರುವುದಾಗಿ ಅವರು ತಿಳಿಸಿದರು. ಈ ಉದ್ದೇಶಕ್ಕಾಗಿ ಮನೆಯನ್ನು ಸರ್ಕಾರಕ್ಕೆ ಅಥವಾ ಕಲೈಗ್ನಾರ್ ಟ್ರಸ್ಟಿಗೆ ವರ್ಗಾಯಿಸಬಹುದಾಗಿದೆ ಎಂದು ಅವರು ತಿಳಿಸಿದರು.ತಿರುವರೂರ್‌ನಲ್ಲಿರುವ 14 ಎಕರೆ ಭೂಮಿಯು ತನ್ನ ಹೆಸರಿನಲ್ಲಿರುವ ಇತರ ಆಸ್ತಿ ಎಂದು ಅವರು ನುಡಿದರು. |