ಔದ್ಯಮೀಕರಣಕ್ಕಾಗಿ ಭೂ ಸ್ವಾಧೀನ ಹಾಗೂ ಭೂಮಿ ಕಳೆದುಕೊಂಡವರಿಗೆ ಪುನರ್ವಸತಿಗೆ ಸಂಬಂಧಿಸಿದ ಮಸೂದೆಗೆ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಹೇಳಲಾಗಿದೆ.ಕಳೆದ ರಾತ್ರಿ ನಡೆದ ಸಂಪುಟ ಸಭೆಯಲ್ಲಿ ಭೂಸ್ವಾಧೀನ(ತಿದ್ದುಪಡಿ) ಮಸೂದೆ 2007 ಹಾಗೂ ಪುನರ್ವಸತಿ ಮಸೂದೆಯ ಅನುಬಂಧಗಳಿಗೆ ಸಂಬಂಧಿಸಿದಂತೆ ಮಮತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಈ ಮಸೂದೆಗಳು ಸಂಪುಟದ ಕಾರ್ಯಸೂಚಿಯಲ್ಲಿವೆ.ಈ ಪ್ರಸ್ತಾಪಿತ ಮಸೂದೆಯಲ್ಲಿ, ಉದ್ದೇಶಿತ ಔದ್ಯಮಿಕ ಯೋಜನೆಯ ಭೂಮಿಯಲ್ಲಿ ಶೇ.70ರಷ್ಟನ್ನು ಖಾಸಗಿ ಡೆವಲಪರ್‌ಗಳು ಕೃಷಿಕರಿಂದ ನೇರವಾಗಿ ಸ್ವಾಧೀನ ಪಡಿಸಿಕೊಳ್ಳಬಹುದಾಗಿದ್ದು, ಉಳಿದ ಶೇ.30ರಷ್ಟನ್ನು ರಾಜ್ಯಸರ್ಕಾರ ಸ್ವಾಧೀನ ಪಡಿಸಿಕೊಳ್ಳುವ ನಿಬಂಧನೆ ಇದ್ದು, ಇದನ್ನು ಮಮತಾ ತೀವ್ರವಾಗಿ ವಿರೋಧಿಸಿದ್ದಾರೆ ಎನ್ನಲಾಗಿದೆ. |