ಅಡ್ಮಿರಲ್ ಗೋರ್‌ಶ್ಕೋವ್ ವಿಮಾನ ವಾಹಕ ನೌಕೆ ಖರೀದಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ನೌಕಾ ಪಡೆಯನ್ನು ಮಹಾಲೇಖ ಪಾಲರು(ಸಿಎಜಿ) ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆಂದು ವರದಿಯಾಗಿದೆ. ಭಾರತೀಯ ಭದ್ರತಾ ವ್ಯವಸ್ಥೆಯನ್ನು ಉನ್ನತಿಗೇರಿಸಲು ವಿಮಾನವಾಹಕ ನೌಕೆಯ ಖರೀದಿಯ ಉದ್ದೇಶವು ನೌಕೆಯ ಪೂರೈಕೆಯಲ್ಲಿನ ವಿಳಂಬವನ್ನು ಪರಿಹರಿಸಿಲ್ಲ ಎಂದು ಅವರು ದೂರಿದ್ದಾರೆ.
ರಶ್ಯಾದ ಹಾನಿಗೊಂಡಿರುವ ವಿಮಾನವಾಹಕ ನೌಕೆ ಅಡ್ಮಿರಲ್ ಗೋರ್‌ಶ್ಕೋವ್- ಇದೀಗ ಐಎನ್ಎಸ್ ವಿಕ್ರಮಾದಿತ್ಯ ಎಂದು ಹೆಸರಿಸಲಾಗಿರುವ ನೌಕೆಯ ಖರೀದಿಗೆ ನೌಕಾಸೇನೆಯು ಹೊಸ ನೌಕೆಗೆ ನೀಡುವುದಕ್ಕಿಂತ ಹೆಚ್ಚಿನ ಹಣನೀಡುತ್ತಿದೆ ಎಂದು ಮಹಾಲೇಖಪಾಲರ ವರದಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನೌಕೆಯನ್ನು ವಶಪಡಿಸಿಕೊಳ್ಳುವಾಗಿನ ಬೆಲೆಯು ಹೆಚ್ಚೂಕಮ್ಮಿ ದ್ವಿಗುಣವಾಗುತ್ತಿದೆ.
ಅದೂಸಹ ನೌಕಾಪಡೆಯು ಸೀಮಿತ ಜೀವಿತಾವಧಿಯ ಹಳೆಯ ನೌಕೆಯನ್ನು 2012-2013ರಲ್ಲಿ ಪಡೆಯುತ್ತದೆ ಎಂದು ಸಿಎಜಿ ವರದಿಯಲ್ಲಿ ಬೆಟ್ಟು ಮಾಡಲಾಗಿದೆ.
ಅಡ್ಮಿರಲ್ ಗೋರ್‌ಶ್ಕೋವ್ ಸೋವಿಯತ್ ಕಾಲದ ವಿಮಾನವಾಹಕ ನೌಕೆಯಾಗಿದ್ದು ಇದನ್ನು ಭಾರತ ಖರೀದಿಸಿದೆ. ಇದರ ಆಧುನೀಕರಣ ಕಾರ್ಯವು ಸೇವ್ಮಾಶ್ ಫ್ಯಾಕ್ಟರಿಯಲ್ಲಿ ನಡೆಯುತ್ತಿದ್ದು, ಎರಡು ಸಾವಿರಕ್ಕೂ ಅಧಿಕ ಮಂದಿ ಇದರ ರಿಪೇರಿ ಕಾರ್ಯದಲ್ಲಿ ತೊಡಗಿದ್ದಾರೆ.
ಭಾರತ ಮತ್ತು ರಶ್ಯಾದ ಕಂಪೆನಿಯ ನಡುವೆ 1.5 ಶತಕೋಟಿ ಡಾಲರ್ ಮೊತ್ತಕ್ಕೆ ರಶ್ಯಾದ ರೋಸೊಬೋರೊನ್‌ಎಕ್ಸ್‌ಪೋರ್ಟ್ ಮತ್ತು ಭಾರತೀಯ ನೌಕಾ ಪಡೆಯ ಮಧ್ಯೆಒಪ್ಪಂದವಾಗಿತ್ತು. ಇದಲ್ಲಿ ಮಿಗ್-29ಕೆ ಯುದ್ಧವಿಮಾನಗಳ ಪೂರೈಕೆ ಸೇರಿದ್ದು, ಅದು 2008ರ ಆಗಸ್ಟ್ ತಿಂಗಳಲ್ಲಿ ಪೂರೈಕೆಯಾಗಬೇಕಿತ್ತು.
ಆದರೆ ನಂತರದಲ್ಲಿ ರಶ್ಯಾವು ತಾನು ನೌಕೆಯ ಆಧುನೀಕರಣ ವೆಚ್ಚವನ್ನು ತಪ್ಪಾಂದಿಜಿಸಿದ್ದು ಹೆಚ್ಚುವರಿ 1.4 ಶತಕೋಟಿ ಡಾಲರ್‌ಗೆ ಬೇಡಿಕೆ ಇಟ್ಟಿತ್ತು. ಇದನ್ನು ಸರ್ಕಾರವು ವಿಪರೀತವಾಯಿತು ಎಂದು ಹೇಳಿತ್ತು.
ಆದರೆ ಇದೀಗ ಈ ನೌಕೆಯ ರಿಪೇರಿಯ ಬೆಲೆ ಕುರಿತ ಮಾತುಕತೆಗಳು ಅಂತಿಮ ಹಂತದಲ್ಲಿದೆ ಎಂದು ಭಾರತ ಮತ್ತು ರಶ್ಯಾ ಹೇಳಿವೆ.
ರಶ್ಯವು 2.9 ಶತಕೋಟಿ ಡಾಲರ್ ಕೇಳುತ್ತಿದ್ದರೆ ಭಾರತವು 2.2 ಶತಕೋಟಿ ಡಾಲರ್‌ಗೆ ಅಂತಿಮಗೊಳಿಸಲು ಜಗ್ಗುತ್ತಿದೆ. ಹಾಗಾಗಿ ಅಂತಿಮ ಬೆಲೆಯು 2.9 ಶತಕೋಟಿಯಿಂದ 2.2 ಶತಕೋಟಿ ಡಾಲರ್‌ಗಳ ಮಧ್ಯೆ ಇರಲಿದೆ.
|