ತಮ್ಮ ಕರ್ತವ್ಯಕ್ಕೆ ದಿನನಿತ್ಯ ತಡವಾಗಿ ಬರುತ್ತಿದ್ದ ಲೇಟ್ ಲತೀಫ್ ವೈದ್ಯರೀಗ ತಮ್ಮ ಒಂದು ವಾರದ ಸಂಬಳವನ್ನು ಕಕ್ಕಬೇಕಾದ ಪರಿಸ್ಥಿತಿ ಎದುರಾಗಿದೆ.
ಘಾತಂಪುರ ತೆಹ್ಶಿಲ್‌ನ ವೈದ್ಯರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಡವಾಗಿ ತಲುಪುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ, ಪರೀಕ್ಷೆಗಾಗಿ ಜಿಲ್ಲಾ ದಂಡಾಧಿಕಾರಿ ಅನಿಲ್ ಸಾಗರ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಂಡ ಒಂದನ್ನು ಕಳುಹಿಸಿದ್ದರು. ಮುಂಜಾನೆ ಎಂಟು ಗಂಟೆಗೆ ಬರಬೇಕಿದ್ದ ವೈದ್ಯರು 10 ಗಂಟೆಯಾದರೂ ಕರ್ತವ್ಯಕ್ಕೆ ಹಾಜರಾಗದೆ ರೋಗಿಗಳು ಕಾಯುವಂತೆ ಮಾಡುತ್ತಿದ್ದರು.
ಈ ತನಿಖೆಯಿಂದಾಗಿ ತಪ್ಪಿತಸ್ಥ 11 ವೈದ್ಯರ ಒಂದು ವಾರದ ಸಂಬಳ ಕತ್ತರಿಸುವಂತೆ ಆದೇಶ ನೀಡಲಾಗಿದೆ. ಅಲ್ಲದೆ, ಒಂದು ವೇಳೆ ಇದೇ ಚಾಳಿಯನ್ನು ಮುಂದುವರಿಸಿದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಡಂಡಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಈ ವೈದ್ಯರು ಘಾತಂಪುರದ ಪಟಾರ, ಭಿಟಾರಗಾಂವ್, ಗಿರ್ಸಿ ಮತ್ತು ರೇವ್ನಾ ಗ್ರಾಮಗಳಿಗೆ ಸೇರಿದವರಾಗಿದ್ದಾರೆ. |