ಸುಮಾರು 17ಅಡಿ ಎತ್ತರದಲ್ಲಿ ಏಳುತ್ತಿರುವ ಸಮುದ್ರದ ರಕ್ಕಸ ಅಲೆಗಳು ಸತತ 2ನೇ ದಿನವೂ ತಮ್ಮ ರೌದ್ರಾವತಾರ ಮುಂದುವರಿಸಿದ್ದು, ನಗರದಲ್ಲಿ ಒಬ್ಬ ಯುವಕ ಬಲಿಯಾಗಿ 9ಜನ ಗಾಯಗೊಂಡಿದ್ದಾರೆ.ಶುಕ್ರವಾರ ಮಧ್ನಾಹ್ನದ ಹೊತ್ತಿಗೆ 17ಅಡಿಗಿಂತ ಹೆಚ್ಚು ಎತ್ತರದ ಅಲೆಗಳು ಏಳಲಿವೆ ಎಂಬ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಬಂದಿತ್ತಾದರೂ, ಅಷ್ಟು ಎತ್ತರದ ಅಲೆಯೇನೂ ಏಳಲಿಲ್ಲ. ಅಲೆಗಳ ಎತ್ತರ 17 ಅಡಿಯನ್ನು ಮೀರಲಿಲ್ಲ. ಆದರೆ ರಕ್ಕಸ ಅಲೆಗಳಿಗೆ ಮನೆ ಕಂಪೌಂಡ್ ಕುಸಿದು ವರ್ಲಿಯಲ್ಲಿ ಒಬ್ಬ ಬಲಿಯಾಗಿದ್ದಾನೆ.ಈ ಸಂದರ್ಭದಲ್ಲಿ ಅಲೆಗಳ ರುದ್ರ ನರ್ತನ ವೀಕ್ಷಿಸಲು ಸಮುದ್ರತೀರದ ಸಮೀಪ ಜನ ತಂಡೋಪ ತಂಡವಾಗಿ ಆಗಮಿಸಿದ್ದರು. ಅವರನ್ನೆಲ್ಲಾ ದೂರ ಸರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. |