ಸುಮಾರು 1000 ಮಂದಿಯ ಸಾಮರ್ಥ್ಯದ ಪ್ರಥಮ ಮಹಿಳಾ ಬೆಟಾಲಿಯನ್ ಅನ್ನು ಬಿಎಸ್ಎಫ್ ತನ್ನ ಕದನ ಕಾರ್ಯಕ್ಕಾಗಿ ಪಂಜಾಬಿನ ಫೆರೋಜ್‌ಪುರ ತರಬೇತಿ ಕೇಂದ್ರದಲ್ಲಿ ತರಬೇತುಗೊಳಿಸಿದೆ.
ಮಹಿಳಾ ಸಿಬ್ಬಂದಿಗಳ ಪಥಸಂಚಲನದಲ್ಲಿ ಗೃಹಚಿವ ಪಿ. ಚಿದಂಬರಂ ಅವರು ಭಾಗವಹಿಸಲಿದರು. ಹೊಸದಾಗಿ ಸೇರ್ಪಡೆಗೊಂಡ ಮಹಿಳಾ ಸೈನಿಕರು ಪಂಜಾಬಿನ ಬಿಎಸ್ಎಫ್ ನೆಲೆಯಲ್ಲಿ ತರಬೇತಿ ಹೊಂದಿದ್ದರು.
ಈ ಮಹಿಳೆಯರನ್ನು ಕಾನ್‌ಸ್ಟೇಬಲ್‌ಗಳಾಗಿ ಸೇರ್ಪಡೆಗೊಳಿಸಲಾಗುತ್ತಿದ್ದು ಪಂಜಾಬ್ ಪ್ರಾಂತ್ಯದಲ್ಲಿ ನೇಮಿಸಲಾಗುವುದು. ಇವರು ಶಸ್ತ್ರಾಸ್ತ್ರಗಳ ಬಳಕೆ, ಗುಪ್ತಚರ ಮಾಹಿತಿ ಸಂಗ್ರಹ. ಗಡಿ ನಿರ್ವಹಣೆ, ಕ್ರೀಡೆ. ಶಸ್ತ್ರಾಸ್ತ್ರ ರಹಿತ ತಪಾಸಣೆ ಹಾಗೂ ಪಹರೆ ಕೆಲಸವನ್ನು ನಿರ್ವಹಿಸಲಿದ್ದಾರೆ.
ನೂತನವಾಗಿ ನೇಮಕಗೊಂಡಿರುವ ಮಹಿಳಾ ಸಿಬ್ಬಂದಿಗಳು ಪುರುಷರೊಂದಿಗೆ ಶೋಧಕಾರ್ಯ, ಚೆಕ್‌ಪೋಸ್ಟ್‌ಗಳು, ವ್ಯಾಪಾರ ಮಾರ್ಗಗಳು ಮತ್ತು ವಲಸೆ ಕೇಂದ್ರಗಳಲ್ಲಿ ತಪಾಸಣೆ ಕಾರ್ಯಗಳನ್ನು ನಡೆಸಲಿದ್ದಾರೆ.
ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು 35 ಸಾವಿರ ಸಿಬ್ಬಂದಿಗಳನ್ನು ಸೇರ್ಪಡೆಗೊಳಿಸಲು ಅರೆಸೇನಾಪಡೆಯು ನಿರ್ಧರಿಸಿದೆ. |