ಆಡಂಬರದ ವಿವಾಹಗಳು ಮತ್ತು ವರದಕ್ಷಿಣೆ ಪಡೆಯುವಿಕೆಯನ್ನು ಕೇರಳ ಶಾಸನಸಭೆಯಲ್ಲಿ ಒಮ್ಮತದಿಂದ ಖಂಡಿಸಲಾಗಿದ್ದು, ಈ ನಡೆಯು ಸಮಾಜ ಕಲ್ಯಾಣ ಸಚಿವೆ ಪಿ.ಕೆ. ಶ್ರೀಮತಿ ಅವರು ಈ ಕುರಿತು ಕ್ರಮಗಳನ್ನು ಕೈಗೊಳ್ಳಲು ಸರ್ಕಾರವು ಸರ್ವ ಪಕ್ಷಗಳ ಸಭೆಯನ್ನು ಕರೆಯುವ ಕುರಿತು ಘೋಷಿಸುವಂತೆ ಮಾಡಿತು. ಪ್ರಶ್ನೋತ್ತರ ಅವಧಿಯ ಸುಮಾರು 45 ನಿಮಿಷಗಳು ಈ ಕುರಿತ ಚರ್ಚೆಗೆ ಮೀಸಲಾಯಿತು. ಸದಸ್ಯರು ಪಕ್ಷಬೇಧ ಮರೆತು ಈ ಕುರಿತು ಏನಾದರು ಕ್ರಮಕೈಗೊಳ್ಳಬೇಕು ಎಂಬ ಒಮ್ಮತಾಭಿಪ್ರಾಯ ವ್ಯಕ್ತಪಡಿಸಿದರು.
ಈ ಕುರಿತ ಮೊದಲ ಹೆಜ್ಜೆ ಎಂಬಂತೆ ಈ ವಿಚಾರವನ್ನು ಚರ್ಚಿಸಲು ಧಾರ್ಮಿಕ ನಾಯಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರರ ವಿಶೇಷ ಸಭೆಯನ್ನು ಎರಡು ತಿಂಗಳೊಳಗಾಗಿ ಕರೆಯುವುದಾಗಿ ನುಡಿದ ಸಚಿವೆ ಶ್ರೀಮತಿ ಅವರು ತಾವು ಸಾಮಾಜಿಕ ಪಿಡುಗುಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ನುಡಿದರು.
ವಿವಾಹ ಸಮಾರಂಭಗಳನ್ನು ನಡೆಸುವ ಸಂದರ್ಭಗಳು ಎದುರಾದಾಗ ಸಿಪಿಐ-ಎಂ ಆದರ್ಶವೆಂಬಂತೆ ವರ್ತಿಸುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಪಕ್ಷದ ಕಾರ್ಯಕರ್ತರೂ ಸಹ ಆಡಂಬರ ವಿವಾಹ ಸಮಾರಂಭಗಳನ್ನು ಏರ್ಪಡಿಸುತ್ತಿದ್ದಾರೆ ಎಂದು ಸಿಪಿಎಂ ಯುವ ನಾಯಕ ಶಾಜು ಹೇಳಿದರು.
ಮೊದಲ ಬಾರಿಗೆ ಶಾಸನ ಸಭೆ ಪ್ರವೇಶಿಸಿರುವ ಅಬ್ದುರೆಹಮಾನ್ ರಾಂದತನಿ ಅವರು ಶಾಸಕರು ಇಂತಹ ಕಾರ್ಯಕ್ಕೆ ಮುಂದಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ನುಡಿದರು. "ತಾನು ವಿವಾಹವಾಗಿ 25 ವರ್ಷಗಳು ಕಳೆದುವು. ನಾನು ಯಾವುದೇ ವರದಕ್ಷಿಣೆ ಸ್ವೀಕರಿಸಿಲ್ಲ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ" ಎಂದು ಅವರು ಸದನಕ್ಕೆ ಕಳುಹಿಸಿದರು.
ಇಂದು ವಿವಾಹ ಉದ್ಯಮವು ಸಾವಿರಾರು ಮಂದಿಯನ್ನು ನೇಮಿಸಿಕೊಂಡಿದೆ. ಹಾಗಾಗಿ ಆಡಂಬರದ ವಿವಾಹಗಳಿಗೆ ವಿಲಾಸಿ ತೆರಿಗೆ ಹೇರುವುದು ಇಂದಿನ ಅಗತ್ಯವಾಗಿದೆ ಎಂದು ಕಾಂಗ್ರೆಸ್‌ನ ವಿ.ಡಿ. ಸತೀಸನ್ ಅವರು ನುಡಿದರು. |