ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ವಕೀಲರು ಮುಷ್ಕರ ಹೂಡುತ್ತಿರುವ ವೇಳೆ ನಷ್ಟವಾಗುತ್ತಿರುವ ಮಾನವ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಾಧೀಶ ಕೆ.ಜಿ ಬಾಲಕೃಷ್ಣನ್ ಅವರು "ಕಾನೂನಿ ಹಿತಾಸಕ್ತಿಗಳಿಗೆ ಭಂಗ ಉಂಟಾದಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು, ಇಲ್ಲವಾದರೆ ಅವರು ಸಮಾದ ದೂಷಣೆಗೆ ಈಡಾಗಬೇಕಾದ ಅಪಾಯವಿದೆ" ಎಂದು ಹೇಳಿದ್ದಾರೆ.
"ದೊಡ್ಡ ಸಂಖ್ಯೆಯ ದಿನಗಳು ಮುಷ್ಕರದಿಂದಾಗಿ ನಷ್ಟವಾಗುತ್ತಿರುವುದು ದುರದೃಷ್ಟಕರ. ಕಾನೂನಿನ ಹಿತಾಸಕ್ತಿಗೆ ಏನಾದರೂ ಗಂಭೀರವಾದುದು ಸಂಭವಿಸಿದರೆ ಮಾತ್ರ ಮುಷ್ಕರಕ್ಕೆ ಮೊರೆಹೋಗಿ" ಎಂದು ಅವರು ಸಲಹೆ ಮಾಡಿದ್ದಾರೆ. ಅವರು ಇಲ್ಲಿ ಹೈ ಕೋರ್ಟ್ ನ್ಯಾಯಾಧೀಶರ ಅತಿಥಿಗೃಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪದೇಪದೇ ಮುಷ್ಕರ ನಡೆಸುವುದರಿಂದ ಪ್ರಕರಣಗಳ ಬಾಕಿಯುಳಿಯುವಿಕೆ ಹೆಚ್ಚುತ್ತದೆ. "ಪ್ರಕರಣಗಳ ವಿಲೇವಾರಿ ಮಾಡಲು ಆಗದಿರುತ್ತಿರುವುದು ತುಂಬ ನೋವುಂಟು ಮಾಡುತ್ತದೆ" ಎಂದವರು ನುಡಿದ ನ್ಯಾಮೂರ್ತಿಗಳು ಪ್ರಕರಣಗಳು ಗರಿಷ್ಠ ಎರಡು ವರ್ಷದೊಳಗಾಗಿ ವಿಲೇವಾರಿ ಆಗಬೇಕು ಎಂದು ನುಡಿದರು. |