ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ದೇಶೀಯ ನಿರ್ಮಿತ ಪರಮಾಣು ಶಕ್ತಿಯ ಐಎನ್‌ಎಸ್ ಅರಿಹಂತ್ ಜಲಾಂತರ್ಗಾಮಿಯನ್ನು ವಿಶಾಖಪಟ್ನಂನ ಪೂರ್ವ ನೌಕಾ ಕಮಾಂಡ್‌ನ ಬಂದರಿನಲ್ಲಿ ಭಾನುವಾರ ದೇಶಕ್ಕೆ ಅರ್ಪಿಸಲಿದ್ದಾರೆ.
ವಿಶೇಷ ವಿಮಾನದಲ್ಲಿ ತಮ್ಮ ಪತ್ನಿಯ ಜತೆ ಬೆಳಿಗ್ಗೆ 11 ಗಂಟೆಗೆ ವಿಶಾಖಪಟ್ನಂನ ಇಎನ್‌ಸಿ ವಾಯುನೆಲೆ ಐಎನ್‌ಎಸ್ ಡೆಗಾಗೆ ಆಗಮಿಸಲಿರುವ ಪ್ರಧಾನಮಂತ್ರಿ ನೇರವಾಗಿ ನೌಕಾಬಂದರಿಗೆ ಆಗಮಿಸಲಿದ್ದಾರೆ.6000 ಟನ್ ತೂಕದ ಸಬ್‌ಮೆರಿನ್‌ನನ್ನು 2 ವರ್ಷಗಳವರೆಗೆ ಅಭ್ಯಾಸದಲ್ಲಿ ಇರಿಸಿ ಬಳಿಕ ಪೂರ್ಣ ಸೇವೆಗೆ ಬಳಸಿಕೊಳ್ಳಲಾಗುವುದು. 2 ವರ್ಷಗಳಲ್ಲಿ ಈ ಸಬ್‌ಮೆರೀನ್ ತನ್ನ ಪರಮಾಣು ಸ್ಥಾವರ ಮತ್ತಿತರ ವ್ಯವಸ್ಥೆಯ ಪರೀಕ್ಷೆಗಳನ್ನು ಕೈಗೊಳ್ಳಲಿದೆ.
ಕಾರ್ಗಿಲ್‌ನಲ್ಲಿ ಪಾಕಿಸ್ತಾನ ಅತಿಕ್ರಮಣಕಾರರ ವಿರುದ್ಧ ಭಾರತದ ವಿಜಯದ ಸಂಕೇತವಾದ ವಿಜಯ ದಿವಸ್‌ಗೆ ಹೊಂದಿಕೆಯಾಗುವಂತೆ ಭಾನುವಾರ ಜಲಾಂತರ್ಗಾಮಿ ಉದ್ಘಾಟನೆ ನೆರವೇರಿಸಲಾಗುತ್ತಿದೆ. ಜಲಾಂತರ್ಗಾಮಿಗೆ ಚಾಲನೆ ನೀಡುವ ಮೂಲಕ ಭಾರತವು ಇಷ್ಟೇ ಸಾಮರ್ಥ್ಯ ಹೊಂದಿರುವ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್‌ನ ಕ್ಸಬ್‌ಗೆ ಸೇರ್ಪಡೆಯಾಗಲಿದೆ. |