ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಕೆಲವೇ ಮಂದಿ ಭಟ್ಟಂಗಿಗಳ ಪಡೆಯಿಂದ ಸುತ್ತುವರಿದಿದ್ದು ಅವರ ಸಲಹೆ ಮೇಲೆ ಕಾರ್ಯನಿರ್ವಹಿಸುತ್ತಿರುವುದರಿಂದ ವಾಸ್ತವ ಸ್ಥಿತಿಗತಿಯ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಭಾನುವಾರ ತಿಳಿಸಿದ್ದಾರೆ. ಮಾಯಾವತಿ ತನ್ನನ್ನು ಸುತ್ತುವರಿದ ಭಟ್ಟಂಗಿಗಳ ಸಲಹೆ ಮೇಲೆ ಹೇಳಿಕೆಗಳನ್ನು ನೀಡುತ್ತಾರೆಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ನುಡಿದರು.
ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆಯೆಂದು ಹೇಳಿದ ಸಿಂಗ್, ವಿದ್ಯುತ್ ಮತ್ತು ಅಭಿವೃದ್ಧಿ ಕೊರತೆಯಿಂದ ರಾಜ್ಯದ ಜನತೆ ಕಷ್ಟಪಡುತ್ತಿದ್ದಾರೆಂದು ಅವರು ಆರೋಪಿಸಿದರು. ಬರಗಾಲದ ಪರಿಸ್ಥಿತಿ ಬಗ್ಗೆ ರಾಜ್ಯಸರ್ಕಾರ ಕೂಡಲೇ ಕೇಂದ್ರಕ್ಕೆ ವರದಿ ಸಲ್ಲಿಸುವ ಮೂಲಕ ಕೇಂದ್ರ ಪರಿಸ್ಥಿತಿ ಅವಲೋಕನಕ್ಕೆ ತಂಡವನ್ನು ಕಳಿಸಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತದೆಂದು ಸಿಂಗ್ ಹೇಳಿದರು.
ಕೇಂದ್ರಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಪರಿಗಣಿಸುತ್ತದೆಯೇ ಎಂಬ ಪ್ರಶ್ನೆಗೆ, ಮಾಯಾವತಿಗೆ ಐದು ವರ್ಷಗಳ ಆಡಳಿತಕ್ಕೆ ಜನಾದೇಶ ಸಿಕ್ಕಿದ್ದು, ತಮ್ಮ ಪಕ್ಷವು ವಿಧಾನಸಭೆ ವಿಸರ್ಜನೆಗೆ ಇಷ್ಟಪಟ್ಟಿಲ್ಲ ಎಂದರು .ತಮ್ಮ ಸರ್ಕಾರದ ಸಾಧನೆ ಬಗ್ಗೆ ಕಾಂಗ್ರೆಸ್ ಸಂಸತ್ ಸದಸ್ಯರಿಗೆ ಕಿರುಹೊತ್ತಗೆ ಕಳಿಸುವುದಾಗಿ ಮಾಯಾವತಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ತಾವು ಅಂತಹ ಹೊತ್ತಗೆ ಸ್ವೀಕರಿಸಿಲ್ಲ. ಅದು ತಮಗೆ ತಲುಪಿದ ಬಳಿಕ ಮಾಯಾವತಿ ವೈಫಲ್ಯಗಳನ್ನು ಬಿಂಬಿಸಿ ಹೊತ್ತಗೆ ಕಳಿಸುವುದಾಗಿ ಹೇಳಿದರು. |