ನಿರ್ಮಾಣ ಹಂತದಲ್ಲಿ ನೊಯ್ಡಾ ಮೆಟ್ರೊ ಮಾರ್ಗದ ಎರಡು ಕ್ಯಾಂಟಿಲಿವರ್ ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜಮ್ರುಡ್‌ಪುರ್ ಮೆಟ್ರೋ ಕುಸಿತದ ಭಯಾನಕತೆ ಮರುಜೀವ ಪಡೆದಿದೆ. ಆಗಸ್ಟ್‌ನಲ್ಲಿ ಸಾರ್ವಜನಿಕರಿಗೆ ತೆರೆದಿಡುವ ಈ ಮೆಟ್ರೊ ಮಾರ್ಗದ ಪರೀಕ್ಷಾರ್ಥ ಪ್ರಯೋಗವು ಶನಿವಾರ ಆರಂಭವಾಯಿತು.
ಸ್ತಂಭಗಳನ್ನು ದೆಹಲಿ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಈ. ಶ್ರೀಧರನ್ ಪರೀಕ್ಷೆ ನಡೆಸಿ ಒಂದು ಬಿರುಕಿನ ಬಗ್ಗೆ ಆಮೂಲಾಗ್ರ ಪರೀಕ್ಷೆಗೆ ಆದೇಶಿಸಿದ್ದು, ಇನ್ನೊಂದು ಬಿರುಕು ಸಣ್ಣದಾಗಿದೆಯಂದು ಅವರು ಹೇಳಿದ್ದಾರೆ. ಜಮ್ರುದ್‌ಪುರ್ ದುರಂತಕ್ಕೆ ಕಾರಣವಾದ ಸ್ತಂಭ ಕೂಡ ಕ್ಯಾಂಟಿಲಿವರ್‌ನಿಂದ ಕೂಡಿದ್ದು, ಕಂಬದಿಂದ ಚಪ್ಪಟೆಯಾಗಿ ಹೊರಹೊಮ್ಮುತ್ತದೆ. ಮೆಟ್ರೋ ಲೈನ್‌ನಲ್ಲಿ ತಿರುವುಗಳ ಬಳಿ ಕ್ಯಾಂಟಿಲಿವರ್ ಕಂಬಗಳನ್ನು ಬಳಸಲಾಗುತ್ತದೆ.
ಕನ್ಸಲ್ಟೆಂಟ್ ಶಿರ್ಶಿ ಪಟೇಲ್ ಮತ್ತು ಅಸೋಸಿಯೇಟ್ಸ್‌ನ್ನು ಮೆಟ್ರೋ ರಚನೆಗಳು ವಿಶೇಷವಾಗಿ ಕ್ಯಾಂಟಿಲಿವರ್‌ಗಳ ತಪಾಸಣೆಗೆ ನಿಯೋಜಿಸಿದ್ದಾಗ ಕಂಬಗಳಲ್ಲಿ ಬಿರುಕು ಬಯಲಿಗೆ ಬಂತು.ಇಂಡಿಯನ್ ಆಯಿಲ್ ಕಟ್ಟಡದ ಬಳಿಕ 10ನೇ ಮತ್ತು 14ನೇ ಕಂಬದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಆಮೂಲಾಗ್ರ ತಪಾಸಣೆ ಬಳಿಕ, 14ನೇ ಕಂಬದಲ್ಲಿ ಬಿರುಕು ಆತಂಕಕ್ಕೆ ಕಾರಣವಿಲ್ಲವೆಂದು ತೀರ್ಮಾನಿಸಲಾಗಿದ್ದು, 10ನೇ ಕಂಬದ ಬಿರುಕಿನ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. |