ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನದ ಆರೋಪ ಅಸಂಬದ್ಧ: ಸ್ಪಾಂಟಾ (India | Balochistan | Afghan | Spanta)
 
ಭಾರತ ಬೆಲೂಚಿಸ್ತಾನದಲ್ಲಿ ಹಸ್ತಕ್ಷೇಪ ನಡೆಸುತ್ತಿದೆಯೆಂಬ ಪಾಕಿಸ್ತಾನದ ಆರೋಪವನ್ನು ಅಸಂಬದ್ಧ ಎಂದು ಭಾರತಕ್ಕೆ ಭೇಟಿ ನೀಡಿರುವ ಆಫ್ಘನ್ ವಿದೇಶಾಂಗ ಸಚಿವ ರಂಗೀನ್ ದಾದ್ಫರ್ ಸ್ಪಾಂಟಾ ತಳ್ಳಿಹಾಕಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಪರಸ್ಪರ ಪ್ರಾಮುಖ್ಯತೆಯ ವಿಷಯಗಳನ್ನು ಚರ್ಚಿಸುವ ಸಲುವಾಗಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಲು ಸ್ಪಾಂಟಾ ನವದೆಹಲಿಗೆ ಆಗಮಿಸಿದ್ದಾರೆ.

ನೈರುತ್ಯ ಬೆಲೂಚಿಸ್ತಾನ ಪ್ರಾಂತ್ಯದಲ್ಲಿ ಭಾರತ ಅಶಾಂತಿ ಹುಟ್ಟುಹಾಕುತ್ತಿದ್ದು, ಬೆಲೂಚಿ ವಿಮೋಚನಾ ಸೇನೆಗೆ ಕುಮ್ಮಕ್ಕು ನೀಡುತ್ತಿದೆಯೆಂಬ ಇಸ್ಲಾಮಾಬಾದ್ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಸ್ಥಳೀಯ ವಿಷಯಗಳಲ್ಲಿ ಹಸ್ತಕ್ಷೇಪಕ್ಕೆ ಆಫ್ಘಾನಿಸ್ತಾನ ಇತರೆ ರಾಷ್ಟ್ರಗಳಿಗೆ ಅವಕಾಶ ನೀಡಿಲ್ಲ ಮತ್ತು ಭಾರತ ಕೂಡ ಆಫ್ಘನ್ ಪ್ರದೇಶವನ್ನು ಪಾಕಿಸ್ತಾನದ ವಿರುದ್ಧ ಬಳಸಿಲ್ಲ ಎಂದು ಸ್ಪಾಂಟಾ ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನ ಸೆನೇಟ್‌ನಲ್ಲಿ ಪಾಕ್ ಪ್ರದಾನಿ ಸಲಹೆಗಾರ ರೆಹ್ಮಾನ್ ಮಲಿಕ್ ಹೇಳಿಕೆ ಮಂಡಿಸಿ, ಬೆಲೂಚಿಸ್ತಾನದ ಅಶಾಂತಿಯಲ್ಲಿ ಭಾರತ ಮತ್ತು ಆಫ್ಘನ್ ಭಾಗಿಯಾಗಿದ್ದಕ್ಕೆ ಸಾಕಷ್ಟು ಸಾಕ್ಷ್ಯಾಧಾರವಿದೆಯೆಂದು ತಿಳಿಸಿದ್ದರು.

ಭಾರತವು ಪಾಕಿಸ್ತಾನದ ಭಯೋತ್ಪಾದನೆ ಗುಂಪುಗಳಿಗೆ ನೆರವು ಮತ್ತು ತರಬೇತಿ ನೀಡುತ್ತಿದೆಯೆಂದು ಸಾಕ್ಷ್ಯಾಧಾರಗಳು ಸಿಕ್ಕಿವೆಯೆಂದು ಅವರು ಹೇಳಿದ್ದರು. ಬೆಲೂಚಿಸ್ತಾನದಲ್ಲಿ ಬಂಧಿತರಾದ ಕೆಲವು ಉಗ್ರಗಾಮಿಗಳು ತಾವು ಭಾರತದ ಪರವಾಗಿ ಆಫ್ಘಾನಿಸ್ತಾನದಲ್ಲಿ ತರಬೇತಿ ಪಡೆದಿದ್ದಾಗಿ ಕ್ಯಾಮೆರಾ ಎದುರು ಒಪ್ಪಿಕೊಂಡಿದ್ದಾರೆಂದು ಮಲಿಕ್ ಹೇಳಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ