ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿಯಲ್ಲಿ ವರುಣನ ಆರ್ಭಟಕ್ಕೆ 10 ಬಲಿ; ಸಂಚಾರ ಅಸ್ತವ್ಯಸ್ತ (New Delhi | India | Rain |Noida)
 
ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಸುರಿದ ಭಾರೀ ಮಳೆಗೆ ಹಲವೆಡೆ ಗೋಡೆ ಕುಸಿತ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ವಿಮಾನ ಹಾರಾಟಕ್ಕೂ ವ್ಯತ್ಯಯವುಂಟಾಗಿದ್ದಲ್ಲದೆ, ರಸ್ತೆಗಳಲ್ಲೆಲ್ಲ ನೀರು ತುಂಬಿಕೊಂಡ ಕಾರಣ ವಾಹನ ಸಂಚಾರಕ್ಕೂ ತೊಡಕುಂಟಾಗಿತ್ತು.

ಸೋಮವಾರ ಸಂಜೆ ನೋಯ್ಡಾದ 58ನೇ ಸೆಕ್ಟರ್‌ನಲ್ಲಿ ಗೋಡೆ ಕುಸಿದಿದ್ದು, ನಾಲ್ವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ದಕ್ಷಿಣ ದೆಹಲಿಯ ಸಂಗಮ್ ವಿಹಾರ ಬಡಾವಣೆಯಲ್ಲಿಯೂ ಗೋಡೆ ಕುಸಿತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ.
PTI


ವರುಣನ ಆರ್ಭಟದಿಂದಾಗಿ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳನ್ನು ತಡವಾಗಿ ಬಿಡಲಾಯಿತು. ಔರಂಗಾಬಾದ್, ಲಕ್ನೋ, ಗೋವಾ ಮತ್ತು ಬೆಂಗಳೂರಿನಿಂದ ಬರಲಿದ್ದ ವಿಮಾನಗಳನ್ನು ಕೂಡ ಕನಿಷ್ಠ ಎರಡು ಗಂಟೆಗಳ ಕಾಲ ತಡೆ ಹಿಡಿಯಲಾಯಿತು ಎಂದು ಮೂಲಗಳು ತಿಳಿಸಿವೆ.

ಇದೇ ರೀತಿ ರೈಲ್ವೇ ಸಂಚಾರದಲ್ಲೂ ವ್ಯತ್ಯಯವುಂಟಾಗಿದೆ. ಹಳಿಗಳ ಮೇಲೆ ನೀರು ನಿಂತ ಕಾರಣ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದ್ದರೆ, ಕೆಲವನ್ನು ವಿಳಂಬಗೊಳಿಸಲಾಯಿತು.

ನಗರದ ಬಹುತೇಕ ರಸ್ತೆಗಳು ನೀರಿನಿಂದ ತುಂಬಿ ಹೋಗಿದ್ದರಿಂದ ವಾಹನ ಸವಾರರು ತೀರಾ ತೊಂದರೆಗೊಳಗಾದರು. ವಿಮಾನ ನಿಲ್ದಾಣದ ರಸ್ತೆಯೂ ಮುಳುಗಡೆಯಾಗಿದ್ದ ಕಾರಣ ಹಲವರಿಗೆ ಕ್ಲಪ್ತ ಸಮಯಕ್ಕೆ ನಿಲ್ದಾಣ ತಲುಪಲಾಗದೆ ಪ್ರಯಾಣ ತಪ್ಪಿಸಿಕೊಂಡರು. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ ಕಾರಣ ಹಲವು ಮನೆಗಳಿಗೂ ಹಾನಿಯಾದ ವರದಿಗಳು ಬಂದಿವೆ.

ಇಂಡಿಯಾ ಗೇಟ್, ಝಾಕೀರ್ ಹುಸೈನ್ ಮಾರ್ಗ್, ಅಶೋಕಾ ರೋಡ್, ಶಹಜಹಾನ್ ರೋಡ್, ರಾಜಪಥ್, ಪ್ರಗತಿ ಮೈದಾನ್, ಹೊರವಲಯದ ರಿಂಗ್ ರೋಡ್ ಬೈಪಾಸ್, ಲಜ್‌ಪತ ನಗರ್- ಆಶ್ರಮ್ ಮಾರ್ಗ, ಕೆಂಪುಕೋಟೆ - ಕಾಶ್ಮೀರಿ ಗೇಟ್ ರೋಡ್ ಮತ್ತು ಧೌಲಾ ಕೌನ್‌ಗಳಲ್ಲಿ ಮಳೆಯ ಕಾರಣದಿಂದ ಗಂಟೆಗಟ್ಟಳೆ ವಾಹನಗಳು ರಸ್ತೆಯಲ್ಲೇ ನಿಂತು ಟ್ರಾಫಿಕ್ ಜಾಮ್ ತೊಂದರೆ ಅನುಭವಸಿಸಬೇಕಾಯಿತು.

ದೆಹಲಿಯಲ್ಲಿ ಸಂಜೆ 5.30ರಿಂದ ರಾತ್ರಿ 8.30ರ ನಡುವೆ 29.4 ಮಿ.ಮೀ. ಮಳೆ ಬಂದಿದೆ. ಭಾನುವಾರದಿಂದ ಲೆಕ್ಕ ಹಿಡಿಯುವುದಾದರೆ ಒಟ್ಟು 69 ಮಿ.ಮೀ. ಮಳೆಯಾಗಿದೆ. ಮಂಗಳವಾರವೂ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ