ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದರಸ ವಿದ್ಯಾರ್ಥಿಗಳಿಗೆ ಉಚಿತ ರೈಲು ಪಾಸ್ (Madrasa | Free rail | eason ticket | Kolkata)
 
ಮದ್ರಸಾ, ಉನ್ನತ ಮದ್ರಸಾ, ಹಾಗೂ ಹಿರಿಯ ಮದ್ರಸಾ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ರೈಲ್ವೇ ಇಲಾಖೆಯು ಬರುವ ಆಗಸ್ಟ್ ಒಂದರಿಂದ ಮಾಸಿಕ ಉಚಿತ ಸೀಸನ್ ಪಾಸ್ (ದ್ವಿತೀಯ ದರ್ಜೆ) ನೀಡಲಿದೆ.

ಇದೇವೇಳೆ ಆಗಸ್ಟ್ ಒಂದರಿಂದ 12ನೆ ತರಗತಿಯ ತನಕದ ವಿದ್ಯಾರ್ಥಿಗಳಿಗೆ ಕೋಲ್ಕತಾ ಮೆಟ್ರೋ ರೈಲು ದರದಲ್ಲಿ ಶೇ.60ರಷ್ಟು ರಿಯಾಯಿತಿ ನೀಡಲು ಇನ್ನೊಂದು ಅಧಿಸೂಚನೆ ಹೊರಡಿಸಲಾಗಿದೆ.

ಪದವಿ ತನಕ ಕಲಿಯುವ ವಿದ್ಯಾರ್ಥಿನಿಯರು ಮತ್ತು 12ನೆ ತರಗತಿ ತನಕ ಕಲಿಯುವ ಹುಡುಗರಿಗೆ ಉಚಿತ ಮಾಸಿಕ ಸೀಸನ್ ಟಿಕೆಟ್ ನೀಡುವ ಯೋಜನೆಗೆ ಸಂಬಂಧಿಸಿದಂತೆ ಇದರ ಜಾರಿಯ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ