ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಜೆಟ್: ವಿಪಕ್ಷಗಳೊಂದಿಗೆ ಸೇರಿದ ಕಾಂಗ್ರೆಸ್ ಸಂಸದ (Cong MP | Budget | Lok Sabha | Transaction Tax)
 
ಸಂಸತ್ತಿನಲ್ಲಿ ಬಜೆಟ್ ಕುರಿತ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದರೊಬ್ಬರು ವಿರೋಧ ಪಕ್ಷಗಳೊಂದಿಗೆ ಸೇರಿ ಬಜೆಟ್‌‍ನಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ವಸ್ತುಗಳ ವಹಿವಾಟು ತೆರಿಗೆಯನ್ನು ತೆಗೆದು ಹಾಕಿರುವ ಮತ್ತು ನಗರದಲ್ಲಿ ಬಡವರ ಸಂಖ್ಯೆ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಕುರಿತು ಗಮನ ಹರಿಸದಿರುವ ಕುರಿತು ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಣಕಾಸು ಮಸೂದೆಯ ಚರ್ಚೆಯಲ್ಲಿ ಭಾಗವಹಿಸಿದ ಸಂಜಯ್ ನಿರುಪಮ್ ಅವರು ಸರಕುಗಳ ಮೇಲಿನ ವಹಿವಾಟು ತೆರಿಗೆಯನ್ನು ತೆಗೆದು ಹಾಕುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದರು. ಅಲ್ಲದೆ, ಇದನ್ನು ಶೇರುಗಳು ಮತ್ತು ವಿನಿಮಯ ಮಂಡಳಿಯಡಿಗೆ ತರುವ ಮೂಲಕ ಸಟ್ಟಾ ಅಪಾಯವನ್ನು ತಪ್ಪಿಸುವಲ್ಲಿ ಸೂಕ್ತ ನಿಯಂತ್ರಣವನ್ನು ಖಚಿತಪಡಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಸರಕುಗಳ ವಹಿವಾಟು 52 ಟ್ರಿಲಿಯನ್ ಡಾಲರ್ ಇರುವ ಕಾರಣ ಸರಕುಗಳ ವಿನಿಮಯವು ಹಣಕಾಸು ವಿನಿಮಯಕ್ಕಿಂತ ಹೆಚ್ಚು ಚಂಚಲವಾಗಿದೆ ಮತ್ತು ಅದರ ಅನಿಯಂತ್ರಣವು ಅಗತ್ಯ ಆಹಾರ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂದು ಬೆಟ್ಟು ಮಾಡಿದರು.

ಇದನ್ನು ಕೃಷಿ ಸಚಿವಾಲಯದ ಕಕ್ಷೆಯಿಂದ ಹೊರತಂದು ಹಣಕಾಸು ಸಚಿವಾಲಯದ ವ್ಯಾಪ್ತಿಗೆ ತರಬೇಕು ಎಂದು ಅವರು ನುಡಿದರು.

ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿರುವ ನಿರುಪಮ್ ಅವರು ನಗರ ಸಹಕಾರಿ ಬ್ಯಾಂಕುಗಳನ್ನು ತೆರಿಗೆ ಜಾಲಕ್ಕೆ ತಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಈ ಸಂಸ್ಥೆಗಳು ಸಮಾಜದ ದುರ್ಬಲ ವರ್ಗಗಳಿಗೆ ಸಹಾಯ ಮಾಡಲಿವೆ ಎಂದು ನುಡಿದರು.

ಹಣಕಾಸು ಸಚಿವರು ತಮ್ಮ ಬಜೆಟಿನಲ್ಲಿ ಗ್ರಾಮೀಣ ಅಭಿವೃದ್ಧಿಯತ್ತ ಗಮನಹರಿಸಿದ್ದು, ನಗರ ಪ್ರದೇಶಗಳತ್ತಲೂ ಗಮನ ಹರಿಸುವ ಅಗತ್ಯವಿದೆ ಎಂದು ನುಡಿದರು. ಹೆಚ್ಚುತ್ತಿರುವ ವಲಸೆಯಿಂದಾಗಿ ನಗರ ಪ್ರದೇಶಗಳಲ್ಲಿ ಬಡವರ ಸಂಖ್ಯೆ ಹೆಚ್ಚಿದೆ ಎಂದು ಅವರು ನುಡಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ